ಬೆದ್ರದ ಕೃಷ್ಣೋತ್ಸವ ಕೃತಜ್ಞತಾ ಸಭೆ – ಇಬ್ಬರು ಕೃಷ್ಣಾವೇಷಧಾರಿ ಹಾಗೂ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ

0
30

ಮೂಡುಬಿದಿರೆ : ಕೃಷ್ಣೋತ್ಸವ 2026ರ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಸದಸ್ಯರು ಹಾಗೂ ಸಹಕರಿಸಿದವರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜವನರ್ ಬೆದ್ರ ಫೌಂಡೇಶನ್ (JBF) ಹಾಗೂ ಅಬ್ಬಕ್ಕ ಬ್ರಿಗೇಡ್–ಮಹಿಳಾ ಘಟಕದ ವತಿಯಿಂದ ವಿಶೇಷ ಕೃತಜ್ಞತಾ ಸಭೆಯನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಯಕ್ಷಗಾನ ಶೈಲಿಯಲ್ಲಿ ಶ್ರೀಕೃಷ್ಣನ ವೇಷ ಧರಿಸಿ ಗಮನ ಸೆಳೆದ ಚಂದ್ರಶೇಖರ್ ಕುಲಾಲ್ ಹಾಗೂ ಪವನ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

ಕೃಷ್ಣೋತ್ಸವದ ಸಂದರ್ಭದಲ್ಲಿ ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರಕಾರ್ಮಿಕರ ಪರವಾಗಿ ಸುನಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೊಸರು ಕುಡಿಕೆ ಉತ್ಸವದ ಮೆರವಣಿಗೆಯಲ್ಲಿ ಜನರನ್ನು ರಂಜಿಸಿದ ಟೀಮ್ ಬ್ಲಾಕ್ ಸ್ನೈಪರ್ ಒಂಟಿಕಟ್ಟೆ, ರಂಜನ್, ಕುಮಾರಿ ಅದ್ವಿಕ, ಮನೀಶ್ ನಾಯ್ಕ, ಯುವ ಬ್ರದರ್ ಟೈಗರ್ಸ್ ಹಾಗೂ JBF ಟೈಗರ್ಸ್ ಪರವಾಗಿ ಅಕ್ಷತ್ ಅವರನ್ನು ಗೌರವಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಸಹಕರಿಸಿದ ಮೂಡುಬಿದಿರೆ ಕನೆಕ್ಟ್ ತಂಡಕ್ಕೂ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಎಲ್ಲಾ ಸದಸ್ಯರಿಗೆ ಶಾಲು ಹೊದಿಸಿ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜವನರ್ ಬೆದ್ರ ಫೌಂಡೇಶನ್‌ನ ಸಂಸ್ಥಾಪಕ ಅಮರ ಕೋಟೆ ವಹಿಸಿದ್ದರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಕ್ತೇಶ್ವರ ಗುರುಪ್ರಸಾದ್ ಹೊಳ್ಳ, ಗೌರವ ಸಲಹೆಗಾರ ಪ್ರವೀಣ್ ಜೈನ್, ಉಪಾಧ್ಯಕ್ಷ ರಾಜೇಶ್ ಕೋಟೆಗಾರ್, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಸಂಚಾಲಕ ರಂಜಿತ್ ಶೆಟ್ಟಿ ಹಾಗೂ ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸುನೀತಾ ಉದಯ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂದೀಪ್ ಸುವರ್ಣ ಕೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣೋತ್ಸವದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಸದಸ್ಯರು, ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.