
ಮೂಡುಬಿದಿರೆ : ತಾಲೂಕಿನ ಬಂಟರ ಸಂಘ (ರಿ.), ಮೂಡುಬಿದಿರೆ ಹಾಗೂ ಯುವ ಬಂಟರ ಸಂಘ, ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಗೆ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.
ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯವನ್ನು ನೆರವೇರಿಸಲಾಯಿತು. ಬಂಟರ ಸಂಘ (ರಿ.) ಮೂಡುಬಿದಿರೆ ಇದರ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಮತ್ತು ಯುವ ಬಂಟರ ಸಂಘದ ಆಧ್ಯಕ್ಷರಾದ ಸಂದೀಪ್ ಶೆಟ್ಟಿ ಹಾಗೂ ಬಂಟರ ಸಂಘದ ಮತ್ತು ಯುವ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮೂಡುಬಿದಿರೆ ತಾಲೂಕಿನ ಬಂಟರ ಸಂಘವು ಹಲವಾರು ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇಂದು ಸಾರ್ವಜನಿಕ ಸೇವೆಗಾಗಿ ಬ್ಯಾರಿಕೇಡ್ ಗಳನ್ನು ಮೂಡುಬಿದಿರೆ ಠಾಣೆಗೆ ಒದಗಿಸಿರುವುದು. ಅತ್ಯಂತ ಸಂತಸದ ವಿಚಾರ ಎಂದು ಆರಕ್ಷಕ ಠಾಣಾಧಿಕಾರಿಗಳು ಶುಭವನ್ನು ಹಾರೈಸಿದರು.
ವರದಿ : ಪ್ರವೀಣ್. ಆರ್. ಕೋಟ್ಯಾನ್. ಮಾರ್ನಾಡ್

