ಮೈಸೂರಿನ ಕವಯಿತ್ರಿ ಪ್ರಭಾ ಶಾಸ್ತ್ರಿ ಜೋಶುಲ್ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’

0
5

ಕಾಸರಗೋಡು,: ಮೈಸೂರಿನ ಖ್ಯಾತ ಕವಯಿತ್ರಿ, ಬರಹಗಾರ್ತಿ, ಅನುವಾದಕಿ, ಗಾಯಕಿ ಹಾಗೂ ಶಿಕ್ಷಕಿ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶುಲ್ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.

ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಸಭಾ ವೇದಿಕೆಯಲ್ಲಿ ಅಕ್ಟೋಬರ್ 18, 2026ರ ಭಾನುವಾರ ನಡೆಯಲಿರುವ ‘ಕಾಸರಗೋಡು ದಸರಾ ಕವಿ ಸಮ್ಮೇಳನ’ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಅಕ್ಟೋಬರ್ 11ರಂದು ಉದ್ಘಾಟನೆಗೊಂಡು ಅಕ್ಟೋಬರ್ 20ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಕವಿ ಸಮ್ಮೇಳನ ಆಯೋಜಿಸಲಾಗಿದೆ.

ಈ ಕುರಿತು ಕಾಸರಗೋಡು ದಸರಾ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯ್ಕ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದುವೆಗೆ ಮುನ್ನ ದೇವರಕೊಂಡ ಪ್ರಭಾವತಿ ಎಂಬ ಹೆಸರಿನಿಂದ ಪರಿಚಿತರಾಗಿದ್ದ ಪ್ರಭಾ ಶಾಸ್ತ್ರಿ ಜೋಶುಲ್ ಅವರು ಇತಿಹಾಸ ಹಾಗೂ ತೆಲುಗು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾವ್ಯ, ಸಾಹಿತ್ಯ, ಅನುವಾದ, ಸಂಗೀತ ಹಾಗೂ ಬೋಧನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಗಮನಾರ್ಹ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.

ತೆಲುಗು ಭಾಷೆಯಲ್ಲಿ ಸುಮಾರು 1,500ಕ್ಕೂ ಅಧಿಕ ಕವನಗಳು ಹಾಗೂ ಕನ್ನಡದಲ್ಲಿ 300ಕ್ಕೂ ಅಧಿಕ ಕವನಗಳನ್ನು ರಚಿಸಿರುವ ಅವರು, ಮಕ್ಕಳಿಗಾಗಿ ಹಲವಾರು ಸಣ್ಣ ಕಥೆಗಳನ್ನು ರಚಿಸಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿವಿಧ ಸಾಹಿತ್ಯಿಕ ವೇದಿಕೆಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದ್ದಾರೆ. ಜೂಮ್ ಮತ್ತು ಗೂಗಲ್ ಮೀಟ್ ಸೇರಿದಂತೆ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಅವರ ಸಾಹಿತ್ಯ ಸೇವೆಯಲ್ಲಿ ರಸ ಸುಧಲು, ಮಧುರ ಭಾವಗಳು, ಮಾಯಾದರ್ಪಣಂ ಕಾವ್ಯ, ಫ್ರಾಗಿ ಮರಿಯು ಸ್ನೇಹಿತುಳು, ದೇವಮ್ಮ ಲೋಟ, ಕಥಾ ಪ್ರಭಾ, ಕಮಲ ಅರಳಿತು, ನಾವು ಹೇಗೆ ಗೆಲ್ಲಬೇಕು, ಭಗವದ್ಗೀತೆ ಮಹತ್ವ, ಕಾವ್ಯ ಸುಪ್ರಭಾ, ನೀರಾಜನ, ಸ್ವಾತಿಮುತ್ತು, ಶಾರದಾ ಪದ್ಯ ಶತಕ, ಮೋನೊ ಮತ್ತು ಏನುಗು ಸೇರಿದಂತೆ ಹಲವು ಕೃತಿಗಳು ಪ್ರಮುಖವಾಗಿವೆ. ಕನ್ನಡ–ತೆಲುಗು ಶಬ್ದಕೋಶವೂ ಮುದ್ರಣಕ್ಕೆ ಸಿದ್ಧವಾಗಿದೆ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರಿಗೆ ‘ಡಾ. ಬಿ.ಆರ್. ಅಂಬೇಡ್ಕರ್ ರತ್ನ’ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ‘ಕವಿತಾ ಶ್ರೀ’, ‘ಗುರುರತ್ನ’, ‘ಗುರ್ರಂ ಜೋಶುವಾ ಸಾಹಿತ್ಯ ಪ್ರಶಸ್ತಿ’, ‘ಸಾಹಿತಿ ರತ್ನ’, ‘ಗಂಗಾ ಪ್ರಶಸ್ತಿ–2024’, ‘ಸಾಹಿತ್ಯ ಸುಗಂಧ ಪ್ರಶಸ್ತಿ–2025’, ‘ಇನ್‌ಸ್ಪೈರ್ ರಾಯಲ್ ಎಕ್ಸಲೆನ್ಸ್ ಅವಾರ್ಡ್–2025’ ಸೇರಿದಂತೆ ಹಲವು ಪ್ರಶಸ್ತಿ–ಪುರಸ್ಕಾರಗಳು ಸಂದಿವೆ.

2025ರಲ್ಲಿ ಕನ್ನಡ ರಾಷ್ಟ್ರೀಯ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಘಟಕದಿಂದ ಕರ್ನಾಟಕ ರಾಜ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಮಂದಿರ–ಹೈದರಾಬಾದ್ ವತಿಯಿಂದ ‘ಕವಿ ಸಾಮ್ರಾಟ್’ ಬಿರುದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ವತಿಯಿಂದ 70ನೇ ವರ್ಷದ ಪ್ರಶಸ್ತಿ ಹಾಗೂ ವಿವಿಧ ಸಾಂಸ್ಕೃತಿಕ ಸಂಘಟನೆಗಳಿಂದ ‘ರಾಜಾ ಮಯೂರವರ್ಮ’ ಮತ್ತು ‘ಮದರ್ ತೆರೆಸ್ಸಾ’ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.

ತೆಲುಗು ಭಾಷೆ ಮತ್ತು ಸಂಸ್ಕೃತಿಯ ಪ್ರಸಾರದಲ್ಲಿಯೂ ಅವರು ಸಕ್ರಿಯರಾಗಿದ್ದು, ರಾಮಾಯಣ, ಮಹಾಭಾರತ, ತೆಲುಗು ಹಬ್ಬಗಳು ಹಾಗೂ ತೆಲುಗು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾರಿಷಸ್ ರೇಡಿಯೋ ಕಾರ್ಪೊರೇಷನ್‌ನ ವಿವಿಧ ಕಾರ್ಯಕ್ರಮಗಳಲ್ಲಿ ತೆಲುಗಿನಲ್ಲಿ ಮಾತನಾಡಿದ್ದಾರೆ. ಕನ್ನಡ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕವನ ವಾಚನ, ಭಕ್ತಿ ಗೀತೆ, ದೇಶಭಕ್ತಿ ಗೀತೆ ಹಾಗೂ ಚಲನಚಿತ್ರ ಗೀತೆಗಳ ಗಾಯನದ ಮೂಲಕವೂ ಅವರು ವಿವಿಧ ವೇದಿಕೆಗಳಲ್ಲಿ ಗಮನ ಸೆಳೆದಿದ್ದಾರೆ.

ಅವರ ಬಹುಮುಖ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’ಕ್ಕೆ ಆಯ್ಕೆ ಮಾಡಲಾಗಿದೆ ಎಂದು ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಪ್ರವೀಣ್ ನಾಯ್ಕ್ ತಿಳಿಸಿದ್ದಾರೆ.

ಮೈಸೂರಿನ ಕವಯಿತ್ರಿ ಪ್ರಭಾ ಶಾಸ್ತ್ರಿ ಜೋಶುಲ್ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’

ಕಾಸರಗೋಡು, ಸೆ. 13: ಮೈಸೂರಿನ ಖ್ಯಾತ ಕವಯಿತ್ರಿ, ಬರಹಗಾರ್ತಿ, ಅನುವಾದಕಿ, ಗಾಯಕಿ ಹಾಗೂ ಶಿಕ್ಷಕಿ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶುಲ್ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.