ಶಿರ್ವ ಕೋಡು ಶ್ರೀಮತಿ ಶಾಂಭವಿ ಹೆಗ್ಗಡ್ತಿ ಸ್ಮರಣಾರ್ಥ ಶ್ರೀ ಮನೋಹರ ಶೆಟ್ಟಿಯವರು ವಿಶ್ವ ಹಿಂದೂ ಪರಿಷದ್ ಮಟ್ಟಾರ್ ಗೆ ನೀಡಿರುವ ಅಂಬ್ಯುಲೆನ್ಸ್ ನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಟ್ಟಾರ್ ಇದರ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಮತ್ತು ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಸುನಿಲ್ ಕೆ ಆರ್, ವಿಶ್ವ ಹಿಂದೂ ಪರಿಷದ್ ಮಟ್ಟಾರ್ ಅಧ್ಯಕ್ಷರಾದ ಸುರೇಶ ಆಚಾರ್ಯ, ಬಜರಂಗದಳ ಮಟ್ಟಾರ್ ಸಂಯೋಜಕ ಸಂದೀಪ್ ಪೂಜಾರಿ ಮತ್ತಿತರರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.


