ಕೆಡಿಪಿ ಸಭೆಗೆ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಆಹ್ವಾನ ನೀಡದಿರುವುದು ಖಂಡನೀಯ: ಲೋಕೇಶ್ ಪೂಜಾರಿ

0
11


ವರದಿ ರಾಯಿ ರಾಜ ಕುಮಾರ್
ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ಹಲವು ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲು ಉದ್ದೇಶದಿಂದ ಪಂಚಾಯತ್ ಅಧ್ಯಕ್ಷರಿಗೆ ಕೆ ಡಿ ಪಿ ಸಭೆಗೆ ಆಹ್ವಾನ ನೀಡಿರುವುದು ಖಂಡನೀಯ. ಆಹ್ವಾನಿಸುವಂತೆ ಎಲ್ಲರಲ್ಲೂ ಮನವಿ ಸಲ್ಲಿಸಲಾಗಿದ್ದರೂ ಉಪೇಕ್ಷಣೆ ನಿಜಕ್ಕೂ ಶೋಚನೀಯ.
ಬಜೆಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ತೀರಾ ಹದಗೆಟ್ಟಿದ್ದು, ಪ್ರತಿದಿನ ಅಪಘಾತಗಳು ನಿರಂತರವಾಗಿವೆ. ಗುಂಡಿಯಲ್ಲಿ ಎದ್ದು ಬಿದ್ದು ವಾಹನಗಳು ಚಲಿಸುತ್ತಿವೆ.
ಎಮ್ ಸೆಝ್ ಆರ್ಥಿಕ ವಲಯದ ನಿರ್ವಸಿತ ಕುಟುಂಬಗಳಿಗೆ ಉದ್ಯೋಗ ಇನ್ನೂ ದೊರಕಿಲ್ಲ. ಕಾಯಂ ಉದ್ಯೋಗದ ಅಗತ್ಯವಿದೆ.
ಇಂದಿನ ವರ್ಷಗಳ ಅಂದಾಜು ರೂ. 8 ಕೋಟಿ ವಸೂಲಿಗೆ ಬಾಕಿ ಇದೆ. ಅದು ವಸೂಲಿಯಾದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ.
ಎಂ ಆರ್ ಪಿ ಎಲ್ ಸಂಬಂಧಿತ 27 ಎಕರೆ ಭೂಮಿ ಹಸಿರು ವಲಯ ಸ್ಥಾಪನೆ ದಾಖಲೆಯಲ್ಲಿ ಮಾತ್ರ ಉಳಿದಿದೆ. ಬೇಡಿಕೆ ಈಡೇರಿಲ್ಲ.
ಕೈಗಾರಿಕಾ ಮಾಲಿನ್ಯ, ಪರಿಸರ ಸಮಸ್ಯೆಗಳಿಂದ ಶಾಂತಿಗುಡ್ಡೆ, ಧೂಮಾವತಿ ಧಾಮ, ಒಡ್ಡಿದಕಳ ರಕ್ಷಣೆ ಆಗಿಲ್ಲ.
ನಗರೋತ್ಥಾನ ಯೋಜನೆಯ 22 23ನೇ ಸಾಲಿನ ಬಾಕಿ ಅನುದಾನ ಇನ್ನು ಬಿಡುಗಡೆಯಾಗಿ ಬಂದಿಲ್ಲ.
16ನೇ ಹಣಕಾಸು ಆಯೋಗದ ಅನುದಾನ ಕನ್ನಡಿಯ ಗಂಟಾಗಿಯೇ ಉಳಿದಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಲಭಿಸುತ್ತಿಲ್ಲ.
ರಾಜ್ಯ ಹಣಕಾಸು ಆಯೋಗದ ಅನುದಾನವು ಲಭ್ಯವಿಲ್ಲ. ಎಸ್ ಎಫ್ ಸಿ ಅಡಿಯಲ್ಲಿ ಬಿಡುಗಡೆಯಾಗುವ ಮುತ್ತದ ವಿವರವನ್ನು ಸಹಕಾರ ಸ್ಪಷ್ಟಪಡಿಸಿ ತ್ವರಿತವಾಗಿ ಬಿಡುಗಡೆ ಮಾಡಬೇಕಾಗಿದೆ.
ಈ ಮೇಲ್ಕಂಡ ಎಲ್ಲಾ ವಿಚಾರಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕಾದ ಕೆ ಡಿ ಪಿ ಸಭೆಗೆ ಆಹ್ವಾನಿಸದೆ ಇರುವುದು ಖಂಡನೀಯ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಲೋಕೇಶ್ ಪೂಜಾರಿ, ದ ಕ ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ದಿನೇಶ್ ಶೆಟ್ಟಿ ಹಾಗೂ ಇತರರು ಹಾಜರಿದ್ದರು.