ಮಂಗಳೂರು ತುಳು ಪರಿಷತ್ ಹುಟ್ಟಿ ಆರು ವರ್ಷದಿಂದ ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದೆ. ಈ ಮಧ್ಯೆ ಮೂರು ಬೃಹತ್ ವಿದ್ಯಾರ್ಥಿ ಸಮ್ಮೇಳನಗಳನ್ನು ನಡೆಸಲಾಗಿತ್ತು. ವಿವಿಧ ಗೋಷ್ಠಿ, ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.
ತುಳುವಿನ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಬೇಕೆಂದು ಬೇಡಿಕೆ ಇಡುತ್ತಿದ್ದೇವೆ. ಶಾಲೆ ಕಾಲೇಜುಗಳಲ್ಲಿ ದ್ವಿತೀಯ ಭಾಷೆಯಾಗಿಯೂ ಕಲಿಯಲು ಅವಕಾಶವನ್ನು ನೀಡಬೇಕು. ತನ್ಮೂಲಕ ತುಳು ಸಂಸ್ಕೃತಿಯ ಪ್ರಚಾರಕ್ಕೆ ವೇದಿಕೆಯಾಗಲಿದೆ ಎಂದು ತುಳು ಪರಿಷತ್ ಅಧ್ಯಕ್ಷ ಕೆ ಶುಭೋದಯ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಪರಿಷತ್ ನ ಗೌರವಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರರು ಹಾಜರಿದ್ದರು.

