ಮಂಗಳೂರು: ಬಳಸಿದ ಅಡುಗೆ ಎಣ್ಣೆಯಿಂದ ಬಯೋ ಡೀಸೆಲ್ ತಯಾರಿಸುವ ‘ಮಸೂಮ್ ಗ್ರೂಪ್’ನ ಭಾಗವಾಗಿರುವ ‘ಎಂ11 ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್’, ಸ್ಥಳೀಯ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯದೊಂದಿಗಿನ ಒಡನಾಟದ ಮೂಲಕ ಕರಾವಳಿ ಕರ್ನಾಟಕದಲ್ಲಿ ಬದ್ಧತೆಯನ್ನು ಬಲಪಡಿಸುತ್ತಿದೆ. ಇದರ ಪಡುಬಿದ್ರಿ ನವೀಕರಿಸಬಹುದಾದ ಇಂಧನ ಘಟಕವು ಈ ಪ್ರದೇಶದ ಜನರು, ಉದ್ಯಮಗಳು ಮತ್ತು ಸಮುದಾಯಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತಿದೆ.
ಪಡುಬಿದ್ರಿ ಘಟಕ ಪ್ರಸ್ತುತ 223 ಉದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಿದ್ದು, ಇದರಲ್ಲಿ 52% ರಷ್ಟು ಮಂದಿ ಮಂಗಳೂರು-ಉಡುಪಿ ಪ್ರದೇಶದವರಾಗಿದ್ದಾರೆ. ಇದು ಸ್ಥಳೀಯ ಉದ್ಯೋಗವನ್ನು ಬಲಪಡಿಸುವ ಮತ್ತು ಪ್ರಾದೇಶಿಕ ಸಾಮಥ್ರ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಸಂಸ್ಥೆಯ ಗಮನಕ್ಕೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ, ಒಟ್ಟು ಉದ್ಯೋಗಿಗಳಲ್ಲಿ 12% ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ ಎಂದು ಎಂದು ಎಂ11 ಎನರ್ಜಿ ಟ್ರಾನ್ಸಿಶನ್ ಪ್ರೈವೇಟ್ ಲಿಮಿಟೆಡ್‍ನ ಮುಖ್ಯಸ್ಥ ಮಾನವ ಸಂಪನ್ಮೂಲ ಬಿಜಯ್ ಚೌಧರಿ ಹೇಳಿದ್ದಾರೆ.
ನೇರ ಉದ್ಯೋಗಾವಕಾಶಗಳ ಹೊರತಾಗಿ, ಪಡುಬಿದ್ರಿ ಘಟಕವು ವಿಶಾಲವಾದ ಸ್ಥಳೀಯ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ. ಪ್ರಸ್ತುತ, 17 ಸ್ಥಳೀಯ ಮಾರಾಟಗಾರರು ಮತ್ತು ಗುತ್ತಿಗೆದಾರರು ಕಂಪನಿಯ ಕಾರ್ಯಾಚರಣೆಯ ಜಾಲದ ಭಾಗವಾಗಿದ್ದು, ಈ ಪ್ರದೇಶದಾದ್ಯಂತ ಸೇವೆಗಳು, ಸರಕು ಸಾಗಣೆ (ಲಾಜಿಸ್ಟಿಕ್ಸ್), ನಿರ್ವಹಣೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಕಂಪನಿಯು ಈ ಭಾಗದ ಶಾಲೆಗಳು, ಆರೋಗ್ಯ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಾ ಸಿಬ್ಬಂದಿಯನ್ನು ಬೆಂಬಲಿಸಿದೆ ಮತ್ತು ಸ್ಥಳೀಯ ಪಾಲುದಾರರೊಂದಿಗೆ ಸಂಬಂಧಗಳನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಎಲ್ಲ ಉಪಕ್ರಮಗಳು ಎಂ11 ಎನರ್ಜಿ ತಾನು ಕಾರ್ಯನಿರ್ವಹಿಸುವ ಸಮುದಾಯಗಳ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವ ಜತೆಗೆ ಸಕಾರಾತ್ಮಕ ಸಾಮಾಜಿಕ ಮತ್ತು ಪರಿಸರ ಪರಿಣಾಮವನ್ನು ಸೃಷ್ಟಿಸುವ ವಿಶಾಲ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಕಟಣೆ ಹೇಳಿದೆ.
