ಸೋಹಾರ್‌ನಲ್ಲಿ ಅ.8ರಂದು ‘ಒಕ್ಕೂಟ’ : ತುಳುವರ ಮಹಾ ಸಮ್ಮಿಲನ

0
33

ಸೋಹಾರ್ : ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ತುಳು ಭಾಷೆಯ ಸೊಗಡನ್ನು ಅನಿವಾಸಿ ತುಳುವರ ನಡುವೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ‘ನಮ ತುಳುವರ್ ಸೋಹಾರ್’ ವತಿಯಿಂದ ‘ಒಕ್ಕೂಟ’ ಎಂಬ ವಿಶೇಷ ತುಳುವರ ಸಮ್ಮಿಲನ ಕಾರ್ಯಕ್ರಮ ಅ.8ರಂದು ಸಂಜೆ 7 ಗಂಟೆಯಿಂದ ಅಲ್ ಖೈರತ್ ಶಲೇಟ್, ಅಲ್ ಘಶ್ಬಾ, ಸೋಹಾರ್ನಲ್ಲಿ ನಡೆಯಲಿದೆ.

‘ತುಳುವರ ಮಹಾ ಒಗ್ಗೂಟ’ ಎಂಬ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ತುಳುವರು ಒಂದೆಡೆ ಸೇರಿ ಸಂಸ್ಕೃತಿ, ಸ್ನೇಹ ಮತ್ತು ಬಾಂಧವ್ಯವನ್ನು ಸಂಭ್ರಮಿಸಲಿದ್ದಾರೆ. ಮನರಂಜನಾ ಕಾರ್ಯಕ್ರಮಗಳು, ವಿವಿಧ ಆಟ-ಚಟುವಟಿಕೆಗಳು, ಸಂಗೀತ ಹಾಗೂ ಮಸ್ತಿ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ವಿಶ್ವಪ್ರಸಿದ್ಧ ಬೈಕರ್ ಶರತ್ ಸಿರಿ ಭಾಗವಹಿಸಲಿದ್ದು, ಅವರೊಂದಿಗೆ ಸಂವಾದ ಹಾಗೂ ಸಮ್ಮಿಲನದ ಅವಕಾಶವೂ ಇರಲಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ರಾತ್ರಿ ಭೋಜನದ ವ್ಯವಸ್ಥೆಯೂ ಮಾಡಲಾಗಿದೆ. ‘ಒಟ್ಟಾಗಿ ಒಂದೇ ತುಳುವ ಕುಟುಂಬ’ ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ಒಕ್ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳುವರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಗತ್ ರಾಜ್ ಪಾಲ್ – 99454007 ಹಾಗೂ ಹರೀಶ್ ಶೆಟ್ಟಿ – 99341643 ಅವರನ್ನು ಸಂಪರ್ಕಿಸಬಹುದು.