
ಉಡುಪಿ : ಸಂತೆಕಟ್ಟೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಹಾಗೂ ಸರ್ವೀಸ್ ರಸ್ತೆ ಅಭಿವೃದ್ದಿಗಾಗಿ ಈಗಾಗಲೇ ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ಬದಿಯಲ್ಲಿರುವ ಅನೇಕ ಅಂಗಡಿಗಳಿಗೆ ಭೂ ಸ್ವಾಧೀನ ಪ್ರಕ್ರೀಯೆಯ ಕಾನೂನಿನ ಅನ್ವಯ ಪರಿಹಾರವನ್ನು ನೀಡಿದೆ. ಆದ್ರೆ ಇದುವರೆಗೆ ಅಂಗಡಿಗಳನ್ನು ನೆಲಸಮಗೊಳಿಸಿ ಬಸ್ ನಿಲ್ಧಾಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸದೇ ಇರುವುದರಿಂದ ನೂರಾರು ಸ್ಥಳೀಯರಿಗೆ, ಉದ್ಯೋಗದಾತರಿಗೆ ಹಾಗೂ ಶಾಲಾ ಮಕ್ಕಳಿಗೆ ಸಮಸ್ಯೆ ಉಂಟಾಗಿದೆ.
ಇದರ ನಡುವೇ ನಗರಸಭೆ ನಿಯಮ ಮೀರಿ ಪರಿಹಾರ ನೀಡಿರುವ ಅಂಗಡಿ ಮಾಲಕರಿಂದ ಬಾಡಿಗೆ ವಸೂಲು ಮಾಡುತ್ತಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ (ರಿ) ಆಕ್ಷೇಪ ವ್ಯಕ್ತಪಡಿಸಿದ್ದು ತಕ್ಷಣ ಬಾಡಿಗೆ ವಸೂಲಾತಿ ನಿಲ್ಲಿಸಬೇಕು ಹಾಗೂ ಸ್ವಾಧೀನ ಪಡಿಸಿಕೊಂಡ ಜಾಗವನ್ನು ನೆಲಸಮ ಮಾಡಿ ಬಸ್ ನಿಲ್ಧಾಣ ನಿರ್ಮಿಸಬೇಕು ಎಂದು ಆಗ್ರಹಿಸಿದೆ.
ಈಗಾಗಲೇ ಅವೈಜ್ಞಾನಿಕ ಅಂಡರ್ ಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಹಲವು ಹೋರಾಟ ನಡೆಸಿರುವ ತುಳುನಾಡ ರಕ್ಷಣಾ ವೇದಿಕೆ ಇಲ್ಲಿ ಅಪೂರ್ಣವಾಗಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಬುಧವಾರ ದಿನಾಂಕ : 7/10/2026 ರಂದು ಸಂತೆಕಟ್ಟೆಯ ಪ್ರದೇಶಕ್ಕೆ ಭೇಟಿ ನೀಡಿ ಅಪೂರ್ಣವಾಗಿ ಉಳಿದಿರುವ ಕಾಮಗಾರಿ ಹಾಗೂ ಸರ್ವೀಸ್ ರಸ್ತೆ ಬದಿಯಲ್ಲಿ ಬೆಳೆದಿರುವ ಬೃಹದಾಕಾರದ ಹುಲ್ಲುಗಳನ್ನು ಕಟಾವು ಮಾಡುವಂತೆ ಆಗ್ರಹಿಸಿದರು. ಸಂತೆಕಟ್ಟೆಯಿಂದ ಉಡುಪಿಗೆ ಹೋಗುವ ರಸ್ತೆಯ ಎಡ ಬದಿಯಲ್ಲಿ ಸರ್ವಿಸ್ ರಸ್ತೆ ಬಲಿರುವ ಮೋರಿ ಬಲಿ ಇರುವ ಹುಲ್ಲು ಹಾಗೂ ಬರೋಡ ಬ್ಯಾಂಕಿನಿಂದ ರೋಬೋ ಸಾಫ್ಟಿನವರೆಗೆ ಹುಲ್ಲು ಕಟ್ಟಿಂಗ್ ಆಗಿಲ್ಲ ಹಾಗೂ ಸರ್ವಿಸ್ ರೋಡಿಗೆ ಚರಂಡಿ ಮಾಡಿರುತ್ತಾರೆ ಚರಂಡಿಯ ಪುಟ್ಟುವೇರಿನ ಎರಡು ಬದಿಯಲ್ಲಿ ಹುಲ್ಲು ಕಟ್ಟಿಂಗ್ ಆಗಿರುವುದಿಲ್ಲ ಅದನ್ನು ಆದಷ್ಟು ಬೇಗ ಕಟಿಂಗ್ ಮಾಡಬೇಕು ರೋಬೋ ಸೋಪ್ಟ್ ಬಳಿ ಬೃಹದಾಕಾರದಲ್ಲಿ ಹುಲ್ಲುಗಳು ಬೆಳೆದಿದ್ದು ಸರ್ವೀಸ್ ಬಸ್ಸುಗಳು ಹಾಗೂ ಸಿಟಿ ಬಸ್ಸುಗಳು ಅಲ್ಲೇ ತಂಗುವುದರಿಂದ ದ್ವಿ ಚಕ್ರ ವಾಹನ ಸವಾರರಿಗೆ ಹಾಗೂ ಇತರ ವಾಹನ ಸವಾರರಿಗೆ ಸಮಸ್ಯೆ ಎದುರಾಗುತ್ತಿದೆ. ಹಲವು ಅಪಘಾತಗಳುಕೂಡ ನಡೆದಿದ್ದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಹುಲ್ಲುಗಳನ್ನು ಕಟಾವು ಮಾಡುವಂತೆ ಆಗ್ರಹಿಸಲಾಯಿತು.
ಇನ್ನು ಮಾಸ್ತಿ ಅಮ್ಮ ದೇವಸ್ಥಾನ ಮತ್ತು ವೆಂಕಟರಮಣ ದೇವಸ್ಥಾನ ಬಳಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಆದ್ರೆ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಸಮಸ್ಯೆಯಾಗುತ್ತಿದೆ. ವಾಹನ ಪಾರ್ಕಿಂಗ್ ಸೇರಿದಂತೆ ಪಾದಾಚಾರಿಗಳಿಗೆ ಆಶೀರ್ವಾದದಿಂದ ಅಂಬಾಗಿಲ್ ತನಕ ಸ್ಟ್ರೀಟ್ ಲೈಟ್ ಅಳವಡಿಸಬೇಕಾಗಿದೆ ಈ ಬಗ್ಗೆಯೂ ಹೆದ್ದಾರಿ ಪ್ರಾಧಿಕಾರ ಗಮನ ನೀಡುವಂತೆ ಸಂಘಟನೆಯ ವತಿಯಿಂದ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತಿ ಇರುವವರು ನಾಗಲಕ್ಷ್ಮಿ ಸುಬ್ರಮಣ್ಯ ನಗರ ಜಿಲ್ಲಾ ಅಧ್ಯಕ್ಷ ಜಿಲ್ಲಾ ಮಹಿಳಾ ಘಟಕ ಮನೋಜ್ ಕೆ ಜಿ ರೋಡ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾನಂದ ನಾಯಕ್ ಅಧ್ಯಕ್ಷರು ಬೈರಂಪಲ್ಲಿ ಘಟಕ ಕೃಷ್ಣ ಮಾರ್ಪಲ್ಲಿ ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಮುಖಂಡರಾದ ಗೋಪಾಲ್ ನಾಯ್ಕ್ ಸಂತೋಷ್ ಬಂಡಾರಿ ಬಾಲಚಂದ್ರ ಪೈ ಶಶಿಧರ ಸಾಲಿಯಾನ್.
