ಸಮಾಜ ಮಂದಿರ ಸಭಾ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ

0
5


ಮೂಡುಬಿದಿರೆ: ಪ್ರತಿ ವರ್ಷದಂತೆ ಈ ವರ್ಷವೂ ಮೂಡುಬಿದಿರೆಯ ಸಮಾಜ ಮಂದಿರ ಸಭಾ ತನ್ನ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಅಕ್ಟೋಬರ್ 11ರಿಂದ 15ರ ತನಕ ಸಂಜೆ 7 ಗಂಟೆಗೆ ನಡೆಸುತ್ತದೆ.
ಅಕ್ಟೋಬರ್ 11ರಂದು ಕೆ ಗುಣ ಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ ನೀಡಲಾಗುವುದು.
ತಾ 12 ರಂದು ನಗು ಒಂದು ದಿವ್ಯ ಔಷಧ ಉಪನ್ಯಾಸ, 13 ರಂದು ವರ್ಧಮಾನ ಪ್ರಶಸ್ತಿ ಪ್ರದಾನ, 14ರಂದು ಶಿಕ್ಷಣಕ್ಕೊಂದು ಹೊಸತನ ಉಪನ್ಯಾಸ, 15 ರಂದು ಯಕ್ಷಗಾನ ಕಲಾ ಸ್ವಾದನೆ ಉಪನ್ಯಾಸ ನಡೆಯಲಿದೆ. ಈ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇದೆ.

ವರದಿ ರಾಯಿ ರಾಜ ಕುಮಾರ್