ಮೈಸೂರು : ದಸರಾ ಮಹೋತ್ಸವವು ಅ.11 ರಿಂದ ಆರಂಭವಾಗಲಿದ್ದು, ಅ.21 ಬುಧವಾರದವರೆಗೆ ಬರೋಬ್ಬರಿ 11 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.
ಅಧಿಕೃತ ವೇಳಾಪಟ್ಟಿಯಂತೆ ನವರಾತ್ರಿಯ ವಿವಿಧ ದಿನಗಳಲ್ಲಿ ನೆರವೇರಲಿರುವ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ:
ಅಕ್ಟೋಬರ್ 11 (ಭಾನುವಾರ): ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆ ನೆರವೇರುವ ವಿಶೇಷ ಪೂಜೆಯೊಂದಿಗೆ ದಸರಾಗೆ ಚಾಲನೆ
ಅ.16: ವಿದ್ಯಾಧಿಪತಿ ಶ್ರೀ ಸರಸ್ವತಿ ಪೂಜೆ, ಅ.20: ಮಹಾನವಮಿ ಹಾಗೂ ಆಯುಧಪೂಜೆ ಆಚರಣೆ. ಯಂತ್ರೋಪಕರಣಗಳು, ವಾಹನಗಳು, ಶಸ್ತ್ರಾಸ್ತ್ರಗಳಿಗೆ ಪೂಜೆ,
ಅ.21: ವಿಜಯದಶಮಿ ಮತ್ತು ವಿಶ್ವವಿಖ್ಯಾತ ಜಂಬೂಸವಾರಿ ರಥೋತ್ಸವ -ಮೈಸೂರು ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ಪನ ಕವಾಯತು ಬನ್ನಿ ಮಂಟಪ ಪೆರೇಡ್ ಮೈದಾನದಲ್ಲಿ ನಡೆಯಲಿದೆ.
ಅ.12 ರಿಂದ ಅ.20, 2026 ರವರೆಗೆ ಯುವ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
ಅ.21 ರಂದು ನೌಪತ್ ಆನೆ ನೇತೃತ್ವದಲ್ಲಿ ಅಭಿಮನ್ಯು ಆನೆಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊರಲಿದ್ದು, ಭವ್ಯ ಮೆರವಣಿಗೆ ನಡೆಯಲಿದೆ.

