ಕಾಂತಾವರ : ಕೇಪ್ಲಾಜೆ ಮಹಾಮ್ಮಾಯಿ ದೇವಿಗುಡಿಯಲ್ಲಿ ಅ. 11ರ ಭಾನುವಾರದಿಂದ ಅ. 20ರ ಮಂಗಳವಾರದವರೆಗೆ ನವರಾತ್ರಿ ಉತ್ಸವವು ಶ್ರದ್ಧಾಭಕ್ತಿಯಿಂದ ಜರಗಲಿದೆ.
ಉತ್ಸವದ ಅಂಗವಾಗಿ ಪ್ರತಿದಿನ ರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಅ. 20ರಂದು ಸಂಜೆ 6.30ರಿಂದ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.
ಅ. 17ರಂದು ಟೀಮ್ ಕೇಪ್ಲಾಜೆ ನೇತೃತ್ವದಲ್ಲಿ ಊರಿನ ಪ್ರತಿಭೆಗಳಿಂದ ಹಾಗೂ ಮಯೂರ ನೃತ್ಯ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅ. 18ರಂದು ವಾಯ್ಸ್ ಆಫ್ ಆರಾಧನಾ, ಮೂಡುಬಿದಿರೆ ಇವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಲಿದೆ.

