ಅಸಹಾಯಕ ಹಿರಿಯ ನಾಗರಿಕನ ಆರೈಕೆಗೆ ಮುಂದಾದ ನಿತ್ಯಾನಂದ ಒಳಕಾಡು

0
22

ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 70 ವರ್ಷ ವಯಸ್ಸಿನ ಆನಂದ ಎಂಬ ಹಿರಿಯ ನಾಗರಿಕರನ್ನು ನಿತ್ಯಾನಂದ ಒಳಕಾಡು ಅವರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿರುತ್ತಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ವಿಚಾರಿಸಿದಾಗ, ಅವರು ತಮ್ಮ ಹೆಸರು ಆನಂದ, 70 ವರ್ಷತಂದೆಯ ಹೆಸರು ಬಸವ ಕೊಟ್ಟಾರಿ, ಎಂದು ತಿಳಿಸಿರುತ್ತಾರೆ. ತಮ್ಮ ವಿಳಾಸವನ್ನು ಕಳತ್ತೂರು, ಸಂತೇಕಟ್ಟೆ, ನಾಗರಾಜ್ ಸೂಡ ಬಾರ್ ಹತ್ತಿರ, ಕರ್ಜೆ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿರುತ್ತಾರೆ.

ಇವರ ಪತ್ನಿಯ ಹೆಸರು ಪ್ರಭಾ ಹಾಗೂ ಮಕ್ಕಳ ಹೆಸರು ಸುಧಾ ಮತ್ತು ಸುಧೀರ್ ಎಂದು ತಿಳಿಸಿರುತ್ತಾರೆ.

ಸದರಿ ಹಿರಿಯ ನಾಗರಿಕರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಿಗಾದರೂ ಇವರ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.