
ಸಜೀಪ ಮುನ್ನೂರು: ನವರಾತ್ರಿ ಮಹೋತ್ಸವದ ಅಂಗವಾಗಿ ಸಜೀಪ ಮುನ್ನೂರಿನ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಸಜೀಪ ಮಾಘಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಪೂಜೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಶಿವರಂಜನಿ ಕಲಾ ಕೇಂದ್ರ, ಬೊಕ್ಕಸ ಇವರ ವತಿಯಿಂದ ನಾಮಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆ ಹಾಗೂ ನಾಮಸಂಕೀರ್ತನೆಯ ಮೂಲಕ ಕ್ಷೇತ್ರದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಅರ್ಚಕ ಕೃಷ್ಣ ಭಟ್, ಕೂಟ ಮಹಾ ಜಗತ್ತು ಕೇಂದ್ರ ಸಮಿತಿಯ ಉಪಾಧ್ಯಕ್ಷ ನ್ಯಾಯವಾದಿ ಸದಾಶಿವ ಐತಾಳ, ಬಾಲಕೃಷ್ಣ ರಾವ್, ಸುಬ್ರಾಯ ಕಾರಂತ, ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ರಾಮಕೃಷ್ಣ ರಾವ್, ಧನೇಶ್ವರ ಕಾರಂತ, ಪೃಥ್ವಿ ರಾವ್, ನಂದಾವರ ವಿನಾಯಕ ಶಂಕರ್, ನಾರಾಯಣ ದುರ್ಗಾಂಬ ದೇವಸ್ಥಾನ ಸಮಿತಿ ಸದಸ್ಯ ದೇವಿಪ್ರಸಾದ್ ಪೂಂಜ, ವಿಶ್ವನಾಥ ಆಳ್ವ, ಎನ್.ಕೆ. ಶಿವ, ಹರಿಪ್ರಸಾದ್ ಭಂಡಾರಿ, ಶ್ರೀನಿವಾಸ ನಾಯಕ್, ರಾಜು ಪೂಜಾರಿ, ಧನಂಜಯ ಶೆಟ್ಟಿ ಪರಾರಿ ಗುತ್ತು ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ನವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವದಿಂದ ಸಂಪನ್ನಗೊಂಡಿತು.
