ಅಕ್ಟೋಬರ್ 26 ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ

0
7

ಲೋಬೊ ಫೌಂಡೇಶನ್ ಮೂಲಕ ಜಾನ್ ವಿಲ್ಸನ್ ಲೋಬೊ ನೂತನ ತುಳಸಿನೇಮಾದ ಶೀರ್ಷಿಕೆಯನ್ನು ಅಕ್ಟೋಬರ್ 26ರಂದು ಮಂಗಳೂರಿನ ಡಾನ್ ಬೋಸ್ಕೊ ಹಾಲ್ನಲ್ಲಿ ಅನಾವರಣಗೊಳಿಸಲಿದ್ದಾರೆ.

ಸಂಜೆ 5:30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಣ್ಯರುಗಳಾದ ಯು ಟಿ ಖಾದರ್, ರೆ ಫಾ ಆಂಡ್ರೋ ಲಿಯೋ ಡಿಸೋಜ, ಮಿಥುನ್ ರೈ, ವಾಲ್ಟರ್ ನಂದಳಿಕೆ, ತಾರಾನಾಥ ಗಟ್ಟಿ, ಶಾಲೆಟ್ ಪಿಂಟೊ, ವಿಜಯ್ ಕುಮಾರ್, ದೇವದಾಸ ಕಾಪಿಕಾಡ್, ವಸಂತ ಬೆರ್ನಾರ್ಡ್, ಹಾಗೂ ಇತರರು ಭಾಗವಹಿಸಲಿದ್ದಾರೆ.

ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ದೇವಿ ಪ್ರಕಾಶ್ ಎಸ್, ಗೀತಾ ಸಾಹಿತ್ಯ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಹ ನಿರ್ದೇಶನ ರೋಷನ್, ಸಂಗೀತ ಗಗನ್ ಸುವರ್ಣ ಮೂಲ್ಕಿ, ಛಾಯಾಗ್ರಹಣ ಗಜೇಂದ್ರ ಕೋಲಾರ, ನಿರ್ಮಾಣ ನಿರ್ವಹಣೆ ನರೇಂದ್ರ ಕೆರೆಕಾಡು.

ವರದಿ ರಾಯಿ ರಾಜ ಕುಮಾರ್