ಮೂಡುಬಿದಿರೆಯ ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಸುಕ್ರತೀಂದ್ರ ಕಲಾಮಂದಿರದಲ್ಲಿ ಮೂರು ದಿನಗಳ ಕಾಲ ಶ್ರೀ ಶಾರದಾ ಮಹೋತ್ಸವ ಸಂಪನ್ನಗೊಂಡಿತು.
ಶ್ರೀ ದೇವರ ವಿಗ್ರಹವನ್ನು ಗುರುಪುರ ಸತ್ಯ ದೇವತಾ ಮಂದಿರದ ಚಂದ್ರಕಾಂತ ಭಟ್ ದಂಪತಿ ಪ್ರತಿಷ್ಠಾಪಿಸಿದರು ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಪ್ರಾಯೋಜಕತ್ವ ವಹಿಸಿದ ಕೆನರಾ ಬ್ಯಾಂಕ್ ನ ಮೂಡುಬಿದಿರೆ ಶಾಖೆಯ ಶ್ರೀ ರಮಾನಂದರಾವ್ ಉದ್ಘಾಟಿಸಿದರು ಶಾಂತಿವನ ಟ್ರಸ್ಟ್ ನಿರ್ದೇಶಕ ಶಶಿಕಾಂತ್ ಜೈನ್ ಚಲನಚಿತ್ರ ನಟಿ ಶಾರದಾದೇವಿ ಸಂಯೋಜಕ ಶೇಖರ ಕಡತಲ ಉಪಸ್ಥಿತರಿದ್ದರು.
ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಉದ್ಯಮಿಗಳಾದ ಪ್ರಭಾ ಚಂದ್ರ ಜೈನ್, ರಾಜೇಂದ್ರ ಕುಮಾರ್, ಬಾಲಚಂದ್ರ ನಾಯಕ್, ಚಲನಚಿತ್ರ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೇ ನಡೆಸಿದರು.
ಸಂಸದ, ಶಾಸಕ, ಮಾಜಿ ಸಚಿವ, ಶಾಸಕ ಗಣ್ಯರು ಭಾಗವಹಿಸಿದ್ದರು. ದೇವರ ವಿಗ್ರಹವನ್ನು ವೈಭವದ ಶೋಭಾ ಯಾತ್ರೆಯೊಂದಿಗೆ ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಾಲಯದ ಮಾನಸ ಸರೋವರದಲ್ಲಿ ಜಲ ಸ್ತಂಭನ ಗೊಳಿಸಲಾಯಿತು ಟ್ರಸ್ಟ್ ನ ಎಲ್ಲಾ ಸದಸ್ಯರು ದೇವಳದ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ಪ್ರಸನ್ನ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
