
ಕಾಸರಗೋಡು : ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ರಾತ್ರಿ ಶ್ರೀ ದೇವರ ಪೇಟೆ ಸವಾರಿ ದೇವಸ್ಥಾನದಿಂದ ಹೊರಟು ಶಾಂತರಾಮ-ಸುಧಾಕರ ರಸ್ತೆ, ಬೀಚ್ ರಸ್ತೆ, ಮಠದ ಪೇಟೆ, ನಾಗರಾಜ ಕಟ್ಟೆಯಾಗಿ ಅಶ್ವತ್ಥ ಕಟ್ಟೆಗೆ ಆಗಮಿಸಿದ ನಂತರ ವಿವಿಧ ಹುಲಿ ವೇಷ ತಂಡಗಳಿಂದ ವೈವಿಧ್ಯಮಯ ಹುಲಿಕುಣಿತ ಕಟ್ಟೆಪೂಜೆ, ಕ್ಷೇತ್ರದಲ್ಲಿ ದರ್ಶನ ಬಲಿ ರಾಜಾಂಗಣ ಪ್ರಸಾದ ಮಂಗಳಪೂಜೆ, ನಂದಾದೀಪ ವಿಸರ್ಜನೆ, ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ನಿರ್ದೇಶನದಲ್ಲಿ ಜರಗಿತು.
ಕ್ಷೇತ್ರ ಸಮಿತಿ ಪ್ರಮುಖರಾದ ಡಾl ಕೆ.ಎನ್ ವೆಂಕಟ್ರಮಣ ಹೊಳ್ಳ, ಕೆ.ಎನ್. ರಾಮಕೃಷ್ಣ ಹೊಳ್ಳ, ಶ್ರೀನಿವಾಸ ಹೊಳ್ಳ, ರವಿ ಕೇಸರಿ, ರಘುರಾಜ ಅಗ್ಗಿತ್ತಾಯ ಎಸ್.ವಿ.ಟಿ. ಫ್ರೆಂಡ್ಸ್ ನ ಕಾರ್ಯಕರ್ತರಾದ ಸುಬ್ರಹ್ಮಣ್ಯ ಮಲ್ಯ ಪ್ರಮೋದ್, ವಸಂತ್ ಕೆರೆಮನೆ, ರಾಮಕೃಷ್ಣ ರಾವ್, ಕಾರ್ತಿಕ್ ರಾವ್, ಬಾಲಕೃಷ್ಣ ಪಡ್ರೆ, ಕೆ.ವಿ.ತಿರುಮಲೇಶ್ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ, ಭರತ್ ರಾಜ್ ಶೆಟ್ಟಿ, ನಾಮದೇವ ಪೈ, ಕೇತನ್, ಮನ್ವಿತ್ ಹುಲಿವೇಷ ತಂಡಗಳಿಗೆ ಡಾl ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಸಾರಥ್ಯದ ಕನ್ನಡ ಭವನದ ವತಿಯಿಂದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ- 2026 ಇದರ ಸಲುವಾಗಿ ಸುಮಾರು 250 ಕ್ಕೂ ಮೇಲ್ಪಟ್ಟು ಸ್ಮಕಣಿಕೆ ನೀಡಲಾಯಿತು. ಸುಮಾರು 8 ಹೆಸರಾಂತ ಹುಲಿವೇಷ ತಂಡಗಳು ಪ್ರತೀ ತಂಡಗಳಲ್ಲಿ 75 ಕಿಂತಲೂ ಹೆಚ್ಚು ಹುಲಿವೇಷಧಾರಿಗಳು ಹಾಗೂ 4 ಸಿಂಹ ವೇಷ ತಂಡಗಳು ಭಾಗವಹಿಸಿದವು.
