ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಐಕ್ಯೂ ಎ ಸಿ ಅಡಿಯಲ್ಲಿ ವಿಜ್ಞಾನ ವಾಣಿಜ್ಯ ಐಟಿ ಹಾಗೂ ಮಾನವಿಕ ಸಂಘಗಳು ಒಟ್ಟಾಗಿ ಅಕ್ಟೋಬರ್ 30ರಂದು ಮಹಾವೀರ ಫೆಸ್ಟ್ 2026 ನ್ನು ಕಾಲೇಜು ಆಡಿಟೋರಿಯಂ ನಲ್ಲಿ ಆಯೋಜಿಸಿದ್ದರು. ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಸಿಂಚನ ಚಿಪ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರಿನ ಶಾಖಾ ಪ್ರಬಂಧಕ ಸಂದೀಪ್ ಕುಮಾರ್ ಅವರು ದೀಪ ಬೆಳಗಿ ಉದ್ಘಾಟಿಸಿ ಇಂದಿನ ದಿನಗಳಲ್ಲಿ ಕುಶಲತೆಯೇ ಪ್ರಧಾನವಾಗಿದೆ. ಕೆಲಸಕ್ಕೆ ಸೇರುವ ಪ್ರಾರಂಭದಲ್ಲಿಯೇ ಎಲ್ಲರೂ ಉತ್ತಮ ಸಂಬಳವನ್ನು ಅಪೇಕ್ಷಿಸುತ್ತಾರೆ. ಆದರೆ ಯಾರು ಕೆಲಸದಲ್ಲಿ ಉತ್ತಮ ಕುಶಲತೆಯನ್ನು ತೋರಿಸುತ್ತಾರೆಯೋ ಅವರನ್ನು ಕಂಪನಿಯವರು ಮೊಟ್ಟಮೊದಲಾಗಿ ಆಯ್ಕೆ ಮಾಡುತ್ತಾರೆ. ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಕೊಕ್ರಾಡಿ ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ದಯಾನಂದ ಅವರು ಎ ಐ ನಿಂದಾಗಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ತಿಳಿಸಿದರು. ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ರಾಧಾಕೃಷ್ಣ ವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಮೂಡುಬಿದಿರೆ ಇ ಎಸ್ ಜಿ ಡಾಟಾ ಸೊಲ್ಯೂಷನ್ಸ್ ನ ಆಪರೇಷನ್ ಮ್ಯಾನೇಜರ್ ಸ್ವಾತಿ ಶೆಟ್ಟಿ, ಜೋಸ್ಸಿ ಮಿನೇಜಸ್ ಬಹುಮಾನಗಳನ್ನು ವಿತರಿಸಿದರು. ರಸಾಯನಶಾಸ್ತ್ರದಲ್ಲಿ ಶ್ರೇಯಸ್, ವಾಣಿಜ್ಯದಲ್ಲಿ ಆಳ್ವಾಸ್ ನ ವಿದ್ಯಾರ್ಥಿಗಳು, ಬ್ರಾಂಡ್ ರಂಗೋಲಿಯಲ್ಲಿ ಅನುಶ್ರೀ, ಚೈತನ್ಯ, ಭೌತಶಾಸ್ತ್ರದಲ್ಲಿ ಕಾರ್ತಿಕ್, ಆಕರ್ಷಣ್, ಪ್ರಾಂಪ್ಟ್ ನಲ್ಲಿ ವಾಣಿ ಕಾಲೇಜು, ಮೈಂಡ್ ವಾಯ್ಸ್ ನಲ್ಲಿ ರಿಯಾನ್ ಮತ್ತು ನಿತೇಶ್, ಇನ್ನೋವೇಶನ್ ನಲ್ಲಿ ಸತ್ಯ ಪ್ರಕಾಶ್, ಸ್ವೀಟನ್, ಕೋಡ್ ವರ್ಡ್ಸ ನಲ್ಲಿ ಗೀತಾ ಶೆಣೈ, ಜೀವಿತ್ ಹಾಗೂ ಇತರರು ಬಹುಮಾನಗಳನ್ನು ಗಳಿಸಿದರು.
ವರದಿ ರಾಯಿ ರಾಜ ಕುಮಾರ್

