ಸಾಹಿತ್ಯದಲ್ಲಿ ಅಮೋಘಶಕ್ತಿ ಅಡಗಿದೆ

0
3

ಅಮೃತ ಪ್ರಕಾಶ ಪತ್ರಿಕೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು, ಮಂಗಳೂರು ಜಂಟಿ ಆಶ್ರಯದಲ್ಲಿ 120ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಅಕ್ಟೋಬರ್ 30ರಂದು ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾರದಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ಪ್ರಕಾಶ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು .

ಮುಖ್ಯ ಸಂಪನ್ಮೂಲ ಅಥಿತಿಗಳಾಗಿ ಮೀನುಗಾರಿಕಾ ಮಹಾ ವಿದ್ಯಾಲಯದ ನಿವೃತ್ತ ಡೀನ್ ಡಾ. ಎಂ .ಎಸ್ ಶಿವಪ್ರಕಾಶ್ ವಹಿಸಿ ಮಾತನಾಡಿದರು. ಸಾಹಿತ್ಯಕ್ಕೆ ಅದ್ಭುತ ಶಕ್ತಿ ಇದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡವರು ಸದಾ ಸಂತೋಷದಲ್ಲಿ ಇರುತ್ತಾರೆ ಎಂದರು .ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತರಾದ ವಿಜಯ ಕೋಟ್ಯಾನ್ ವಿದ್ಯಾರ್ಥಿಗಳು ಮುಂಬರುವ ಈ ದೇಶದ ಸತ್ಪ್ರಜೆಗಳು ಸಾಹಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು .

ಈ ಸಂದರ್ಭದಲ್ಲಿ ಮೀಡಿಯಾ ಮನಸ್ಸು ತಂಡದ ರೂವಾರಿ ಶಶಿ ಬೆಳಾಯರು ಅವರಿಗೆ *ಅಮೃತ ಪ್ರಕಾಶ ಸಮಾಜ ಸೇವಾ ರತ್ನ 2026 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲ ಅರುಣ ಕುಮಾರಿ ಉಪಸ್ಥಿತರಿದ್ದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಯಶೋಧಕುಮಾರಿ ವಂದಿಸಿದರು. ಡಾ. ಅರುಣರಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
.