
-ಮಂದಾರ ರಾಜೇಶ್ ಭಟ್
ಕರ್ನಾಟಕ ಜಾನಪದ ಪರಿಷತ್ತು ಮೂಡುಬಿದರೆ ತಾಲೂಕು ಘಟಕವು ಪದ್ಮಶ್ರೀ ಭಟ್ ನಿಡ್ಡೋಡಿ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನ ಎಲ್ಲ ಪದಾಧಿಕಾರಿಗಳು ಒಮ್ಮತದಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ. ಇದರೊಂದಿಗೆ ಇತರ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುತ್ತಿರುವುದು ಅತ್ಯುತ್ತಮ ಬೆಳವಣಿಗೆಯಾಗಿದ್ದು, ಅಧ್ಯಕ್ಷರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರ ಸದಸ್ಯರ ಸಹಭಾಗಿತ್ವ ಮತ್ತು ಪ್ರೋತ್ಸಾಹವು ಮೂಡುಬಿದರೆ ಜಾನಪದ ಪರಿಷತ್ತನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದೆ.
ಕಾರ್ಯಕ್ರಮದ ವಿವರ
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮೂಡುಬಿದರೆ ಹಾಗೂ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಮಂತೂರು ಇವರ ಸಹಭಾಗಿತ್ವದಲ್ಲಿ ‘ಜಾನಪದ ರಸಪ್ರಶ್ನೆ ಕಾರ್ಯಕ್ರಮ’ವು ದಿನಾಂಕ 16.11.2026, ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಿಮಂತೂರು ಇಲ್ಲಿ ಆ ಯೋಜನೆಗೊಂಡಿದೆ.
ಪ್ರಮುಖ ಅತಿಥಿಗಳು ಮತ್ತು ಗಣ್ಯರು
ಉದ್ಘಾಟನೆ : ಉಷಾ ವಿಶ್ವನಾಥ ಭಟ್ (ಜ್ಯೋತಿಷ್ಯರು, ತೋಕೂರು)
ಸಭಾ ಅಧ್ಯಕ್ಷತೆ: ಪದ್ಮಶ್ರೀ ಭಟ್ ನಿಡ್ಡೋಡಿ (ಅಧ್ಯಕ್ಷರು, ಕ.ಜಾ.ಪ ತಾಲೂಕು ಘಟಕ, ಮೂಡುಬಿದಿರೆ)
ಗೌರವ ಉಪಸ್ಥಿತಿಯಲ್ಲಿ : ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ (ಅಧ್ಯಕ್ಷರು, ಕ.ಜಾ.ಪ ದಕ್ಷಿಣ ಕನ್ನಡ), ಮಂದಾರ ರಾಜೇಶ್ ಭಟ್ (ಅಧ್ಯಕ್ಷರು, ಮಂದಾರ ಪ್ರತಿಷ್ಠಾನ) ರಾಜೇಶ್ ಸೈಫ್ಲಾರ್ಕ್ (ಕಾರ್ಯದರ್ಶಿ, ಕ.ಜಾ.ಪ ದಕ್ಷಿಣ ಕನ್ನಡ), ಡಾ. ರಾಜೇಶ್ ಆಳ್ವ (ತುಳುವರ್ಲ್ಡ್ ಫೌಂಡೇಶನ್), ಕೆ. ಭುವನಾಭಿರಾಮ ಉಡುಪ (ಯುಗಪುರುಷ, ಕಿನ್ನಿಗೋಳಿ), ಅಗರಿ ರಾಘವೇಂದ್ರ ರಾವ್ (ಅಗರಿ ಎಂಟರ್ಪ್ರೈಸಸ್), ಡಾ. ಪುರುಷೋತ್ತಮ ಕೆ.ವಿ. (ಪ್ರಾಧ್ಯಾಪಕರು, ಪೋಂಪೇ ಕಾಲೇಜು, ಐಕಳ) ಇರಲಿದ್ದಾರೆ.
ಕಾರ್ಯಕ್ರಮ ನಿರ್ವಹಣೆ ಹಾಗೂ ಧನ್ಯವಾದ
ಕಾರ್ಯಕ್ರಮ ನಿರ್ವಹಣೆ : ಚೇತನಾ ರಾಜೇಂದ್ರ ಹೆಗ್ಡೆ (ಸಂಚಾಲಕರು, ಕ.ಜಾ.ಪ ಮೂಡುಬಿದಿರೆ)
ಧನ್ಯವಾದ ಅರ್ಪಣೆ: ಚಂದ್ರಹಾಸ ದೇವಾಡಿಗ (ಕ.ಜಾ.ಪ ಮೂಡುಬಿದಿರೆ)
ಈ ಕಾರ್ಯಕ್ರಮಕ್ಕೆ ಶ್ರೀ ಶಾರದಾ ಸೊಸೈಟಿ ರಿ. ಶಿಮಂತೂರಿನ ಅಧ್ಯಕ್ಷರು ಹಾಗೂ ನಿರ್ದೇಶಕರು, ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ರಕ್ಷಕ ಸಂಘದವರು ಸಹಭಾಗಿತ್ವ ನೀಡಿ ಶುಭ ಹಾರೈಸಿದ್ದಾರೆ
ಜನಪದ ಎಂದರೆ ಅದೊಂದು ಬರೀ ಕಲೆಯಲ್ಲ, ಅದೊಂದು ಜೀವಂತ ಜೀವನ ಪದ್ಧತಿ. ಜನಪದವಿಲ್ಲದೆ ನೈಜ ಬದುಕಿಲ್ಲ. ಇದು ಕೃಷಿ ಬದುಕಿನ ಪ್ರತಿಬಿಂಬ ಹಾಗೂ ಕೈಗನ್ನಡಿಯಾಗಿದೆ. ಜಗತ್ತಿನ ಪ್ರತಿಯೊಂದು ದೇಶಗಳಲ್ಲೂ ಜನಪದವು ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಸೊಗಡನ್ನು ಹೊಂದಿದೆ.
ನಮ್ಮ ಕರ್ನಾಟಕದ ಹೆಮ್ಮೆಯ ಸಂಕೇತವಾಗಿರುವ ರಾಮನಗರದ ‘ಜಾನಪದ ಲೋಕ’ವು ಯುನೆಸ್ಕೋ (UNESCO) ಮಾನ್ಯತೆಯನ್ನು ಪಡೆದುಕೊಂಡಿರುವುದು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಇಂತಹ ಮಹತ್ವದ ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಮತ್ತು ಉಳಿಸಿ ಬೆಳೆಸಲು ಈ ರೀತಿಯ ಕಾರ್ಯಕ್ರಮಗಳು ಅತ್ಯಂತ ಅನಿವಾರ್ಯ ಹಾಗೂ ಪ್ರಸ್ತುತವಾಗಿವೆ.
