ಅಹಿಂದ ಬಳಗದಿಂದ ಶಾಸಕ ಡಾ. ಮಂತರ್ ಗೌಡರಿಗೆ ಸನ್ಮಾನ

0
6

ಸೋಮವಾರಪೇಟೆ : ಕೊಡಗು ಜಿಲ್ಲಾ ಅಹಿಂದ ಬಳಗದ ವತಿಯಿಂದ ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡರನ್ನು ಅವರ ಸ್ವಗೃಹದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ನಾಪಂಡ ಮುತ್ತಪ್ಪರವರ ನೇತೃತ್ವದಲ್ಲಿ ಭೇಟಿ ಮಾಡಿ ಸಂಘಟನೆಯ ಬೆಳವಣಿಗೆ ಹಾಗೂ ಬಲವರ್ಧನೆಯ ಬಗ್ಗೆ ವಿಸೃತ ಚರ್ಚೆ ನಡೆಸಿ ಶಾಸಕರನ್ನು ಸನ್ಮಾನ ಮಾಡಲಾಯಿತು. ಅಗತ್ಯ ಸಹಕಾರ ನೀಡುವ ಭರವಸೆಯನ್ನು ಶಾಸಕರು ನೀಡಿ ಶುಭ ಕೋರಿದ್ದಾರೆ.

ವರದಿ: ಪ್ರಿತುನ್ ಪೂವಣ್ಣ