2 ಕೋಟಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

0
39

ಕಾಪು ವಿಧಾನಸಭಾ ಕ್ಷೇತ್ರದ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 2 ಕೋಟಿ 10 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 05-11-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅದಮಾರು – ಕುಂಜೂರು ರಸ್ತೆ ಅಭಿವೃದ್ಧಿ – 1.5 ಕೋಟಿ, ಎಲ್ಲೂರು ಬ್ರಹ್ಮ ಬೈದರ್ಕಳ ರಸ್ತೆ ಅಭಿವೃದ್ಧಿ – 20 ಲಕ್ಷ, ಮಾಣಿಯೂರು ಹರೀಶ್ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ – 20, ಕೆಮ್ಮುಂಡೇಲು – ಉಳ್ಳೂರು – ಪಾದೆಬೆಟ್ಟು ಸಂಪರ್ಕ ರಸ್ತೆ ಅಭಿವೃದ್ಧಿ – 20 ಲಕ್ಷ ಸೇರಿದಂತೆ ಒಟ್ಟು 2 ಕೋಟಿ 10 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿರಾಜ್ ರಾವ್, ಮಾಜಿ ಉಪಾಧ್ಯಕ್ಷರಾದ ಉಷಾ ಎನ್, ಎಲ್ಲೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಎಲ್ಲೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜಯರಾಮ್ ದೇವಾಡಿಗ, ಶಾಂತಿ ಆಚಾರ್ಯ, ಶೋಭಾ ಹರೀಶ್ ಶೆಟ್ಟಿ ,ದಯಾನಂದ ಶೆಟ್ಟಿಗಾರ್ ಹರೀಶ್ ಬೆಳ್ಳಿಬೆಟ್ಟು , ರಾಜೇಂದ್ರ, ಬಿಜೆಪಿ ಬೂತ್ ಪ್ರಮುಖ್ ಸದಾನಂದ ಪೂಜಾರಿ ಹಾಗೂ ಪಕ್ಷದ ಹಿರಿಯರು, ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.