ಕಳತ್ತೂರಿನಲ್ಲಿ ಪಂಚ ಗ್ಯಾರೆಂಟಿ ಸಂಭ್ರಮಾಚರಣೆ

0
12

ಕಳತ್ತೂರು : ಕರ್ನಾಟಕದ ರಾಜ್ಯಾ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಿಂದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಬಿಂಬಿಸುವ ಸಾರ್ವಜನಿಕರಿಗೆ ಇದರ ಪ್ರಯೋಜನವನ್ನು ಅರಿವು ಮೂಡಿಸುವ ಬೃಹತ್ ಸಮಾರಂಭವು ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶಯದಲ್ಲಿ ಮಾಜಿ ಸಚಿವರಾದ ಕೆಪಿಸಿಸಿ ಪ್ರಚಾರ ಸಮಿತಿ ಯ ರಾಜ್ಯಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಳತ್ತೂರು ಕುಶಲಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂ ನಡೆಯಿತು.

ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಲಾಲ್ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿಸಿ, ಕಾಂಗ್ರೆಸ್ ಪಕ್ಷವು ನೀಡುವ ಭರವಸೆಯಂತೆ ಸರಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ l ಶಕ್ತಿ ಅನ್ನಭಾಗ್ಯ,ಗ್ರಹ ಜ್ಯೋತಿ ಗ್ರಹಲಕ್ಷ್ಮಿ ಮತ್ತು ಯುವನಿಧಿ 5 ಗ್ಯಾರಂಟಿ ಯೋಜನೆಗಳನ್ನು ಯಾವುದೇ ತೊಡಕಿಲ್ಲದೆ ಜಾರಿಗೆ ತರುವ ಸಮಿತಿ ರಾಜ್ಯ ಸರ್ಕಾರ ದಾಖಲೆ ಬರೆದು ವಿರೋಧ ಪಕ್ಷಗಳ ಟೀಕೆಗಳನ್ನು ಮೀರಿ ನಿಂತು ಕೊಟ್ಟ ಮಾತಿನಂತೆ ನಡೆದುಕೊಂಡು ಬಂದದ್ದು ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಕಾಂಗ್ರೆಸ್ ಪಕ್ಷದ ವಕ್ತರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ದಿವಾಳಿ ಆಗಿದೆ. ಅನುದಾನ ಇಲ್ಲ ಎಂದು ವಿರೋಧಪಕ್ಷದವರು ತಿಳಿಸಿದರೂ,. ಕೋಟಿಗಟ್ಟಲೆ ಕಾಮಗಾರಿ ಶಿಲನ್ಯಾಸ ಕಾರ್ಯಕ್ರಮವು ಸರಾಗವಾಗಿ ನಡೆಯುತ್ತದೆ. ಇದು ರಾಜ್ಯಸರ್ಕಾರದ ಅನುದಾನ ಅಲ್ಲವೇ, ಬೇರೆ ಮೂಲಗಳಲ್ಲಿ ಅನುದಾನ ಬಂತಾ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಲಿಷ್ಠವಾಗಿದೆ.

ಇದರ ಬಗ್ಗೆ ಅನುಮಾನವೇ ಬೇಡ ಎಂದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಮೆಸ್ಕಾಂ ಪವರ್ ಮ್ಯಾನ್ ಗಳು ನಾಟಿ ವೈದ್ಯ ಶಾಲಿನಿ ಪೂಜಾರಿ ಇನ್ನಿತರರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ವೈ. ಸುಕುಮಾರ್ ಕಾಂಗ್ರೆಸ್ ಕಾಪು ಗ್ಯಾರಂಟಿ ಸಮಿತಿ ಸದಸ್ಯರಾದ ಪ್ರಭಾಕರ ಆಚಾರ್ಯ ಕಟಪಾಡಿ, ಸವಿತಾ ಜೆನ್ನಿ ಕುಂದರ್, ಹಸನಬ್ಬ ಶೇಕ್ ಶಿರ್ವ, ಮೆಲ್ವಿನ್ ಡಿಸೋಜಾ ಶಿರ್ವ,ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮೊಹಮ್ಮದ್ ಪಾರೂಕ್ ಚಂದ್ರನಗರ, ದಿವಾಕರ ಶೆಟ್ಟಿ ರತನ್ ಶೆಟ್ಟಿ ಶಿರ್ವ, ಹಮೀದ್ ಮೂಳೂರು , ರಾಷ್ಟ್ರ ಮಹಿಳಾ ನಾಯಕಿ ಜೇಬಾ ಸೆಲ್ವಾ ಬೆಳಪು, ಸ್ಟಾನಿಲೆಸ್ ಕಾರ್ಡ, ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷರಾದ ಶರ್ಫುದ್ದಿನ್ ಶೇಕ್,ರೋಹನ್ ಕುಮಾರ್ ಕುತ್ಯಾರು, ಆಲ್ವಿನ್ ಡಿಸೋಜಾ ಕುತ್ಯಾರು, ಮೈಕಲ್ ಡಿಸೋಜಾ ಪಿಲಾರ್, ಶೇಖರ್ ಬಿ ಶೆಟ್ಟಿ ಕಳತ್ತೂರು ರಾಘವೇಂದ್ರ ಭಟ್ ಕಳತ್ತೂರು ಕೃಷ್ಣ ಕುಲಾಲ್ ಕುತ್ಯಾರ್,ಜಾನ್ಸನ್ ಕರ್ಕಡ ಕಳತ್ತೂರು,ಕಾಪು ವಿಧಾನ ಸಭಾ ಅಲ್ಪ ಸಂಖ್ಯಾತ ಸಮಿತಿಯ ಅಧ್ಯಕ್ಷರಾದ ನಿಯಾಜ್, ಹಾಗೂ ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಸರ್ವ ಸದಸ್ಯರು ಉಪಸ್ಥಿತರಿದ್ದರು, ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.