58 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆಗಾಗಿ ₹70 ಸಾವಿರ ಅಗತ್ಯ
ವಿಶ್ವಕರ್ಮ ಯುವ ಸಮೂಹದ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ 58 ವರ್ಷದ ಶ್ರೀಮತಿ ಆಚಾರ್ ಚಾಂತರು ಅವರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಅಕ್ಟೋಬರ್ 14ರಂದು ಆರೋಗ್ಯ ತಪಾಸಣೆಗಾಗಿ ವೈದ್ಯರನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಬಲ ಸ್ತನದಲ್ಲಿ 1.2 ಸೆಂಟಿಮೀಟರ್ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಆದಷ್ಟು ಬೇಗ ಶಸ್ತ್ರಚಿಕಿತ್ಸೆ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದು, ಶಸ್ತ್ರಚಿಕಿತ್ಸೆಗೆ ಅಂದಾಜು ₹70,000 ವೆಚ್ಚವಾಗಲಿದೆ ಎಂದು ತಿಳಿಸಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕಷ್ಟವಾಗಿರುವುದರಿಂದ ವಿಶ್ವಕರ್ಮ ಯುವ ಸಮೂಹದ ಸದಸ್ಯರು ಹಾಗೂ ಸ್ನೇಹಿತರು ತಮ್ಮ ಕೈಲಾದಷ್ಟು ಧನಸಹಾಯ ನೀಡಿ ಮಹಿಳೆಯ ಶಸ್ತ್ರಚಿಕಿತ್ಸೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಸಹಾಯ ಮಾಡಲು ಇಚ್ಛಿಸುವವರು ಪೋಸ್ಟರ್ನಲ್ಲಿರುವ ಗೂಗಲ್ ಪೇ ಅಥವಾ ಫೋನ್ ಪೇ ಸಂಖ್ಯೆ 8762403877 ಮೂಲಕ ಹಣಕಾಸಿನ ನೆರವು ನೀಡಬಹುದು.
ಮಾನವೀಯತೆಯ ದೃಷ್ಟಿಯಿಂದ ನಿಮ್ಮ ಸಣ್ಣ ಸಹಾಯವೂ ಒಂದು ಜೀವಕ್ಕೆ ದೊಡ್ಡ ಆಸರೆಯಾಗಬಹುದು.

