ವಿದ್ಯಾದಾಯಿನೀ ಹಳೆ ವಿದ್ಯಾರ್ಥಿಗಳಿಂದ ವೈದ್ಯಕೀಯ ಆರ್ಥಿಕ ನೆರವು

0
8

ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆ ಸುರತ್ಕಲ್ ನ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ರವರು Sacral Giant Cell Tumour ಸಮಸ್ಯೆಯ ಚಿಕಿತ್ಸೆಗೆ ಅವಶ್ಯವಿರುವ ವೈದ್ಯಕೀಯ ನೆರವಿಗಾಗಿ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಜರಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾದಾಯಿನೀ ಪ್ರೌಢ ಶಾಲೆ ಶಿಕ್ಷಕ ರಕ್ಷಕ ಸಂಘ ಮತ್ತು ಬೋಳೂರು ಸಾವಿತ್ರಿ ವಾಸುದೇವ ರಾವ್ ಚಾರಿಟೇಬಲ್ ಟ್ರಸ್ಟ್ ಅಶೋಕನಗರ ಮಂಗಳೂರು ರವರ ಸಹಯೋಗದಲ್ಲಿ ರೂಪಾಯಿ ಎಂಭತ್ತೇಳು ಸಾವಿರ (₹87000/-) ನ್ನು ಫಲಾನುಭವಿ ವಿದ್ಯಾರ್ಥಿನಿಯ ತಾಯಿ ಶ್ರೀಮತಿ ನಿಂಗವ್ವ ಮುದ್ನೂರ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷರು ಶ್ರೀ ಜಯಚಂದ್ರ ಹತ್ವಾರ್ ಹಾಗೂ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಶ್ರೀ ರಾಘವೇಂದ್ರ ಎಚ್ ವಿ, ಬೋಳೂರು ಸಾವಿತ್ರಿ ವಾಸುದೇವ ರಾವ್ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರು ಶ್ರೀ ಬಾಲಕೃಷ್ಣ ಹೊಸಬೆಟ್ಟು, ವಿದ್ಯಾದಾಯಿನೀ ಪ್ರೌಢ ಶಾಲೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಶ್ರೀ ಎಮ್ ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು.