ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸ

0
5


ಉಡುಪಿ: ಕೃಷ್ಣಮಠದ ರಥಬೀದಿಯಲ್ಲಿ ಕನಕದಾಸರ ಶಿಲಾಮಯ ಗುಡಿಗೆ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.


ಶೀರೂರು ಮಠದ ದಿವಾನ್​ ಡಾ.ಉದಯ ಕುಮಾರ್​ ಸರಳತ್ತಾಯ ಹಾಗೂ ಪಾರುಪತ್ಯೆಗಾರ ಶ್ರೀಶ ಭಟ್​ ಕಡೇಕಾರು ಹಾಗೂ ಉತ್ತರಾದಿ ಮಠದ ಸತ್ಯಧ್ಯಾನ ಆಚಾರ್ಯ ಕಟ್ಟಿ, ವಿದ್ವಾಂಸರಾದ ವಿದ್ಯಾಸಿಂಹಾಚಾರ್​ ಮಾಹುಲಿ, ವಿದ್ಯಾಧಿಶಾಚಾರ್​ ಗುತ್ತಲ್​, ಪ್ರಕಾಶ್​ ಆಚಾರ್​ ಸವಣೂರು, ಪಾಂಡುರಂಗಾಚಾರ್​ ರೊಟ್ಟಿ, ಆನಂದತೀರ್ಥಚಾರ್​ ಚಿಮ್ಮಲಿ, ಕಾರ್ತಿಕ್​ ಅಚಾರ್​, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಹಾಗೂ ಭಕ್ತ ಕನಕದಾಸ ಸೇವ ಟ್ರಸ್ಟ್​ ಗೌರವಾಧ್ಯಕ್ಷ ಸಿಎಲ್​ ಆನಂದ್​, ಉಪಾಧ್ಯಕ್ಷ ಸಿದ್ದರಾಜು ಕೆ.ಎಸ್​., ಪ್ರಧಾನಕಾರ್ಯದರ್ಶಿ ಬಾಬು ಎಸ್​.ಎನ್​., ಭಕ್ತ ಕನಕದಾಸ ಸೇವಾ ಟ್ರಸ್ಟ್​ನ ದಯಾನಂದ್​ ಸಿ.ಕೆ., ಸಮಾಜ ಸೇವಕ ಚಂದ್ರಶೇಖರ್​, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಡೂಳ್ಳಿನ್​, ಬಸವರಾಜ್​ ಕುರುಬರ್​, ಹನುಮಂತ್​ ಆಡಿನ್​, ಬ್ಯಾನಪ್ಪ ಎಚ್​ ಕುರಿ, ದೇವು ಪೂಜಾರಿ, ನಿತಿನ್​ ಮೈಸೂರು ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದರು ವಿಡಿಯೋ ಕರೆ ಮೂಲಕ ಅನುಗ್ರಹಿಸಿದರು.