ಉಡುಪಿ: ಕೃಷ್ಣಮಠದ ರಥಬೀದಿಯಲ್ಲಿ ಕನಕದಾಸರ ಶಿಲಾಮಯ ಗುಡಿಗೆ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.

ಶೀರೂರು ಮಠದ ದಿವಾನ್ ಡಾ.ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಉತ್ತರಾದಿ ಮಠದ ಸತ್ಯಧ್ಯಾನ ಆಚಾರ್ಯ ಕಟ್ಟಿ, ವಿದ್ವಾಂಸರಾದ ವಿದ್ಯಾಸಿಂಹಾಚಾರ್ ಮಾಹುಲಿ, ವಿದ್ಯಾಧಿಶಾಚಾರ್ ಗುತ್ತಲ್, ಪ್ರಕಾಶ್ ಆಚಾರ್ ಸವಣೂರು, ಪಾಂಡುರಂಗಾಚಾರ್ ರೊಟ್ಟಿ, ಆನಂದತೀರ್ಥಚಾರ್ ಚಿಮ್ಮಲಿ, ಕಾರ್ತಿಕ್ ಅಚಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಭಕ್ತ ಕನಕದಾಸ ಸೇವ ಟ್ರಸ್ಟ್ ಗೌರವಾಧ್ಯಕ್ಷ ಸಿಎಲ್ ಆನಂದ್, ಉಪಾಧ್ಯಕ್ಷ ಸಿದ್ದರಾಜು ಕೆ.ಎಸ್., ಪ್ರಧಾನಕಾರ್ಯದರ್ಶಿ ಬಾಬು ಎಸ್.ಎನ್., ಭಕ್ತ ಕನಕದಾಸ ಸೇವಾ ಟ್ರಸ್ಟ್ನ ದಯಾನಂದ್ ಸಿ.ಕೆ., ಸಮಾಜ ಸೇವಕ ಚಂದ್ರಶೇಖರ್, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಡೂಳ್ಳಿನ್, ಬಸವರಾಜ್ ಕುರುಬರ್, ಹನುಮಂತ್ ಆಡಿನ್, ಬ್ಯಾನಪ್ಪ ಎಚ್ ಕುರಿ, ದೇವು ಪೂಜಾರಿ, ನಿತಿನ್ ಮೈಸೂರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದರು ವಿಡಿಯೋ ಕರೆ ಮೂಲಕ ಅನುಗ್ರಹಿಸಿದರು.

