ಮೂಡುಬಿದಿರೆ : ತಾಲೂಕಿನ ಗ್ರಾಮಗಳಾದ ಪಡುಮಾರ್ನಾಡು, ಮೂಡು ಮಾರ್ನಾಡು, ದರೆಗುಡ್ಡೆ, ಪಣಪಿಲ, ಕೆಲ್ಲಪುತ್ತಿಗೆ ಗ್ರಾಮಗಳ ಅಂಗನವಾಡಿ ಇತ್ಯಾದಿ ಸಾರ್ವಜನಿಕ ಪ್ರದೇಶಗಳಲ್ಲಿ ಬೆಳುವಾಯಿ ಪ್ರದೇಶದ ಪಶು ಆಸ್ಪತ್ರೆಯ ಸಖಿಯರುಗಳಾದ ಆಶಾ ಹಾಗೂ ದೀಕ್ಷಿತಾ ನಾಯಿಗಳಿಗೆ ಕಳೆದ ಒಂದು ವಾರಕಾಲದಲ್ಲಿ ಉಚಿತ ರೇಬೀಸ್ ಚುಚ್ಚುಮದ್ದು ನೀಡಿದರು.

