ಸರಪಾಡಿ ಶ್ರೀ ಶರಬೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶತರುದ್ರ ಪಾರಾಯಣ, ವೇದಸೂಕ್ತ ಪಠಣ

0
35

ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಕೃಷ್ಣ ಪಕ್ಷ ತ್ರಯೋದಶಿಯ ಪ್ರದೋಷ ಪುಣ್ಯಕಾಲದಲ್ಲಿ ಸಾಮೂಹಿಕ ಶತರುದ್ರ ಪಾರಾಯಣ ಹಾಗೂ ವೇದಸೂಕ್ತಗಳ ಪಾರಾಯಣ ಧಾರ್ಮಿಕ ಕಾರ್ಯಕ್ರಮವು ಸರಪಾಡಿ ಶ್ರೀ ಶರಬೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವದಿಂದ ನಡೆಯಿತು.

ಸಜೀಪ ಮಾಣಗಣೆ ಕ್ಷೇತ್ರದ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ವೇದಮೂರ್ತಿ ಪುಂಜೂರು ವಿಜಯಕೃಷ್ಣ ಐತಾಳ, ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮವಾಹಕ ಶಂಕರನಾರಾಯಣ ಹೊಳ್ಳ ಹಾಗೂ ಜಯರಾಮ ಕಾರಂತ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಶ್ರೀ ರುದ್ರ ಪಠಣ ಸಮಿತಿಯ ಅಧ್ಯಕ್ಷ ಎಂ. ಜಯರಾಮ ಮೈಯ್ಯ, ಸಂಚಾಲಕ ಎ. ರವಿಶಂಕರ ಮೈಯ್ಯ, ಶಾಂತರಾಮ ರಾವ್ ಎಸ್.ಬಿ., ಎನ್. ರಾಮಚಂದ್ರ ಮೈಯ್ಯ, ಮಕ್ಕಾರು ಶ್ರೀನಿವಾಸ ಹೊಳ್ಳ, ಅರ್ಬಿ ಕೃಷ್ಣಕುಮಾರ ಸೋಮಯಾಜಿ, ಕೆ. ಮಿಥುನ ರಾವ್, ಪ್ರಭಾಕರ ಸೋಮಯಾಜಿ, ಡಾ. ಸೀತಾರಾಮ ಮೈಯ್ಯ, ರವೀಶ್ ಐತಾಳ, ಎ. ಧನೇಶ್ವರ ಕಾರಂತ, ಪದ್ಮನಾಭ ಹೊಳ್ಳ, ಕೆ. ರಾಜರಾಮ ಐತಾಳ, ಕೆ. ರಮೇಶ್ ರಾವ್, ಸುಧಾಕರ ತುಂಗ, ನವೀನ ರಾವ್, ಶ್ರೀನಿವಾಸ ಸೋಮಯಾಜಿ, ನಾರಾಯಣ ರಾವ್ ಸೇರಿದಂತೆ ಹಲವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.