ಅಂತರ್ ಕೊಡವ ಸಮಾಜದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

0
9

ವಿರಾಜಪೇಟೆ : ಕೊಡವ ಕ್ರಿಕೆಟ್ ಅಕಾಡೆಮಿ (ರಿ) ಕೊಡಗು, ಇವರ ಪ್ರಾಯೋಜಕತ್ವದ “ಅಂತರ್ ಕೊಡವ ಸಮಾಜಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ”ದ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಕ್ರಿಕೆಟ್ ಟೂರ್ನಮೆಂಟನ್ನು ಉದ್ಘಾಟಿಸಿ ಶುಭ ಕೋರಿದ ಮಾನ್ಯ ಶಾಸಕರು, ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ಒಬ್ಬ ಕ್ರಿಕೆಟ್ ಪಟುವಿನ ನೈಜ ಕ್ರಿಕೆಟ್ ಪ್ರತಿಭೆಯನ್ನು ತಿಳಿಸುತ್ತದೆ. ಕ್ರಿಕೆಟ್ ವೃತ್ತಿಯಲ್ಲಿ ಯಶಸ್ಸು ಕಾಣಲು ಲೆದರ್ ಬಾಲ್ ಕ್ರಿಕೆಟ್ ಆಡುವುದು ಎಷ್ಟು ಮುಖ್ಯವೋ ಅದರ ಚಾಣಾಕ್ಷತೆಯನ್ನು ಬಳಸಿಕೊಳ್ಳುವುದು ಅಷ್ಟೇ ಮುಖ್ಯ. ಕೊಡವ ಕ್ರಿಕೆಟ್ ಅಕಾಡೆಮಿಯವರ ಈ ಪ್ರಯತ್ನ ಶ್ಲಾಘನೀಯ ಹಾಗೂ ಸಮುದಾಯದ ಯುವಕ/ಯುವತಿಯರಿಗೆ ತಮ್ಮ ಕ್ರೀಡಾ ಭವಿಷ್ಯವನ್ನು ರೂಪಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಲಿದೆ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈಗಾಗಲೇ ಕೊಡವ ಸಮುದಾಯದ ಹಲವು ಯಶಸ್ವಿ ಕ್ರಿಕೆಟಿಗರು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಇಂತಹ ಬಹಳಷ್ಟು ಪ್ರತಿಭೆಗಳು ಇಂತಹ ಕ್ರೀಡಾಕೂಟಗಳಿಂದ ಮೂಡಿಬರುವಂತಾಗಲಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾದ ಕೀತಿಯಂಡ ಕರ್ಸನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ವಲಯ ಅಧ್ಯಕ್ಷರು ಕೋದಂಡ ಸೋಮಣ್ಣ, ಪಂಚಾಯತ್ ಮಾಜಿ ಸದಸ್ಯರು ಅದೆಂಗಡ ವಿನು ಉತ್ತಪ್ಪ, ಪಕ್ಷದ ಮುಖಂಡರು ಸುಬ್ಬಯ್ಯ, ಅಜ್ಜಿಕುಟ್ಟಿರ ಪೊನ್ನಪ್ಪ, ಮುಖ್ಯ ಅತಿಥಿಯಾಗಿ ಬಾಳಲೆ ಕೊಡವ ಸಮಾಜ ಅಧ್ಯಕ್ಷರು ಬೋಸ್ ಚಿಟ್ಟಿಯಪ್ಪ, ಕೃಷ್ಣ ಗಣಪತಿ, ಸುಗುಣ ಗಣಪತಿ, ಪ್ರತಾಪ್ ಬೆಳ್ಳಿಯಪ್ಪ, ಹಾಗೂ ಪ್ರಮುಖರುಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ