ದಿನಾಂಕ 9.10.2026ನೇ ಸೋಮವಾರ ಸಂಸ್ಥೆಯಲ್ಲಿ ಲಕ್ಷ್ಮಿ ಪೂಜೆ ಆಯುಧ ಪೂಜೆ ಹಾಗೂ ವಾಹನ ಪೂಜೆಯು ಆಡಳಿತ ಮಂಡಳಿಯ ಅಧ್ಯಕ್ಷರು , ಕಾರ್ಯದರ್ಶಿಗಳು , ಸಂಚಾಲಕರು , ಸಂಸ್ಥೆಯ ಮುಖ್ಯಸ್ಥರು , ಆಡಳಿತಾಧಿಕಾರಿ , ವ್ಯವಸ್ಥಾಪಕರು , ಸಂಸ್ಥೆಗಳ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದ ಉಪಸ್ಥಿತಿಯಲ್ಲಿ ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿನ ಅಲಂಗಾರು ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲ್ಪಟ್ಟಿತು.
ಲಕ್ಷ್ಮೀ ಪೂಜೆಯಿಂದ ಆರಂಭಗೊಂಡ ಪೂಜೆಯು ಸಂಸ್ಥೆಯ ಎಲ್ಲಾ ಕಚೇರಿಗಳ , ಅಡುಗೆ ಮನೆಯ , ತರಗತಿಗಳ ಹಾಗೂ ಆಯುಧ ಮತ್ತು ವಾಹನಗಳ ಪೂಜೆಯೊಂದಿಗೆ ಸಂಪನ್ನಗೊಂಡಿತು.
ರೋಟರಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ನಾರಾಯಣ ಪಿ ಯಂ, ಕಾರ್ಯದರ್ಶಿ ಅನಂತಕೃಷ್ಣ ರಾವ್ , ಸಂಚಾಲಕ ಪ್ರವೀಣಚಂದ್ರ ಜೈನ್ , ಪ್ರಾಂಶುಪಾಲ ರವಿ ಕುಮಾರ್ , ಮುಖ್ಯೋಪಾಧ್ಯಾಯನಿ ತಿಲಕಾ ಅನಂತವೀರ ಜೈನ್ , ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ , ವ್ಯವಸ್ಥಾಪಕ ಶತೀಶ್ , ಶಿಕ್ಷಕರು , ಶಾಲಾ ವಾಹನಗಳ ಚಾಲಕರು ಮತ್ತು ನಿರ್ವಾಹಕರು ಹಾಗೂ ಇತರ ಶಿಕ್ಷಕೇತರ ಸಿಬ್ಬಂದಿವರ್ಗ ಸಂಭ್ರಮದಿಂದ ಪಾಲ್ಗೊಂಡರು.
ಪೂಜೆಯ ಪ್ರಸಾದ ವಿತರಣೆ ಹಾಗೂ ಉಪಹಾರದೊಂದಿಗೆ ಪೂಜಾ ಕಾರ್ಯಕ್ರಮ ಮುಕ್ತಾಯಗೊಂಡಿತು..

