2026-27ನೇ ಸಾಲಿನ ಕಂಬಳ ವೇಳಾಪಟ್ಟಿ ಬಿಡುಗಡೆ

0
65

2026-27ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಋತುವಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ನವೆಂಬರ್ 14ರಂದು ಸಾಣೂರಿನಲ್ಲಿ ಮೊದಲ ಕಂಬಳ ನಡೆಯಲಿದೆ. ಮೇ 1ರಂದು ಕಡಂದಲೆಯಲ್ಲಿ ಕೊನೆಯ ಕಂಬಳ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಅಸೋಸಿಯೇಷನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಸಹಭಾಗಿತ್ವದಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಕೋಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರ ನೇತೃತ್ವದಲ್ಲಿ ವಿವಿಧ ಕಂಬಳಗಳ ಅಧ್ಯಕ್ಷರ ಸಹಕಾರದೊಂದಿಗೆ ವೇಳಾಪಟ್ಟಿ ರೂಪಿಸಲಾಗಿದೆ.

2026-27ನೇ ಸಾಲಿನ ಕಂಬಳ ವೇಳಾಪಟ್ಟಿ ಹೀಗಿದೆ:

ನವೆಂಬರ್ 14 – ಸಾಣೂರು , ನವೆಂಬರ್ 21 – ಕೊಡಂಗೆ, ನವೆಂಬರ್ 28 – ಕಕ್ಕೆಪದವು, ಡಿಸೆಂಬರ್ 5 – ಹೊಕ್ಕಾಡಿಗೋಳಿ, ಡಿಸೆಂಬರ್ 12 – ಬಾರಾಡಿಬೀಡು, ಡಿಸೆಂಬರ್ 19 – ವೇಣೂರು, ಡಿಸೆಂಬರ್ 26 – ಮೂಲ್ಕಿ, ಡಿಸೆಂಬರ್ 27 – ಬಳ್ಳಮಂಜ, ಜನವರಿ 2 – ಮಂಗಳೂರು, ಜನವರಿ 9 – ಮಿಯ್ಯಾರು, ಜನವರಿ 16 – ನರಿಂಗಾನ, ಜನವರಿ 23 – ಮೂಡುಬಿದಿರೆ, ಜನವರಿ 30 – ಪುತ್ತೂರು, ಫೆಬ್ರವರಿ 6 – ಐಕಳ, ಫೆಬ್ರವರಿ 13 – ಜಪ್ಪಿನಮೊಗರು, ಫೆಬ್ರವರಿ 20 – ಅಡ್ವೆ, ಫೆಬ್ರವರಿ 27 – ವಾಮಂಜೂರು, ಮಾರ್ಚ್ 6 – ಎರ್ಮಾಳ್, ಮಾರ್ಚ್ 13 – ಬಂಟ್ವಾಳ, ಮಾರ್ಚ್ 20 – ಬಂಗಾಡಿ, ಮಾರ್ಚ್ 27 – ಉಪ್ಪಿನಂಗಡಿ, ಏಪ್ರಿಲ್ 3 – ಗುರುಪುರ, ಏಪ್ರಿಲ್ 10 – ಬಳ್ಕುಂಜೆ, ಏಪ್ರಿಲ್ 17 – ಹರೇಕಳ, ಏಪ್ರಿಲ್ 24 – 80 ಬಡಗಬೆಟ್ಟು ಹಾಗೂ ಮೇ 1 – ಕಡಂದಲೆ.

ಎಲ್ಲ ಕಂಬಳ ಸಮಿತಿಗಳ ಆಯೋಜಕರು ಹಾಗೂ ಕೋಣಗಳ ಯಜಮಾನರು ಸಹಕರಿಸುವಂತೆ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರಾವಳಿಯ ಸಾಂಪ್ರದಾಯಿಕ ಕಂಬಳ ಕ್ರೀಡೆಯ ಹೊಸ ಋತುವಿನ ಆರಂಭಕ್ಕೆ ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.