ಕೆ. ಜಿ. ರೋಡ್ ಪೆರ್ಡೂರು ರಾಜ್ಯ ಹೆದ್ದಾರಿಯ ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೀಳಂಜೆ ಶಾಲೆಯಿಂದ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಈ ಭಾಗದ ಸಾರ್ವಜನಿಕರ ಬೇಡಿಕೆಯಂತೆ ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು 4.30 ಕೋಟಿ ವೆಚ್ಚದಲ್ಲಿ 1.1 ಕಿಲೋ ಮೀಟರ್ ವರೆಗೆ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ, ಅವೈಜ್ಞಾನಿಕವಾಗಿರುವ ರಸ್ತೆಯ ಅಪಾಯಕಾರಿ ತಿರುವು ಹಾಗೂ ಏರಿಳಿತವನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಪೂರಕವಾಗುವಂತೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕರಾದ ಉದಯ ಕೋಟ್ಯಾನ್, ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಮಾಜಿ ಅಧ್ಯಕ್ಷರಾದ ಆಶಾ ಡಿ ಪೂಜಾರಿ, ಮಾಜಿ ಉಪಾಧ್ಯಕ್ಷರಾದ ಗುರುರಾಜ್ ಕಾರ್ತಿಬೈಲು, ಪಂಚಾಯತ್ ಸದಸ್ಯರಾದ ಸುಜಾತ ಉಮೇಶ್ ಶೆಟ್ಟಿ ವಾರ್ಡ್ ಅಧ್ಯಕ್ಷರುಗಳಾದ ಸುಂದರ್ ಪೂಜಾರಿ, ಜಗದೀಶ್ ಸನಿಲ್ , ಗಣೇಶ್ ಪೂಜಾರಿ, ವಿಶ್ವನಾಥ್, ಗಣಪತಿ ನಾಯಕ್, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಆಚಾರ್ಯ, ಪ್ರಸಾದ್ ಸುವರ್ಣ, ಜಯಕರ ದಾಸ್,ರಾಜೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

