ಅಗರಿ ಮಾಡ ಆಲಾಡಿ ಖಾನದಲ್ಲಿ ದೀಪಾವಳಿ ಪರ್ವ ಸೇವೆ, ಬಲಿಂದ್ರ ಪೂಜೆ ಸಂಪನ್ನ

0
8

ಸಜೀಪ: ಶ್ರೀ ನಡಿಯೇಳು ದೈವಗಳು, ಶ್ರೀ ಉಳ್ಳಾಲ್ದಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಸಾನಿಧ್ಯವಿರುವ ಅಗರಿ ಮಾಡ ಆಲಾಡಿ ಖಾನ, ಸಜೀಪ ಮಾಗಣೆ ಶ್ರೀ ಕ್ಷೇತ್ರದಲ್ಲಿ ಪಂಚ ಪರ್ವಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಪ್ರಯುಕ್ತ ಪರ್ವ ಸೇವೆ ಹಾಗೂ ಬಲಿಂದ್ರ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಕ್ಷೇತ್ರದ ಸಂಪ್ರದಾಯದಂತೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ದೈವಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಹರೀಶ್ ರೈ, ಜೀವನ ಆಳ್ವ, ಅರುಣ ಆಳ್ವ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.