ಸ್ವಾಭಿಮಾನಿ, ಶಿಸ್ತಿನ, ನಿಷ್ಟುರ, ಆದರ್ಶ ವ್ಯಕ್ತಿ ಕೆ ಜಯವರ್ಮರಾಜ್ ಬಲ್ಲಾಳ್ -ಯು ಟಿ ಖಾದರ್

0
4

ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಪ್ತ ಸಂಧ್ಯಾ ಸಹಕಾರ ಸಪ್ತಾಹ ಸಂಭ್ರಮ 2026 ನವೆಂಬರ್ 14ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಸಹಕಾರ ಕಲ್ಪವೃಕ್ಷ ಪ್ರಶಸ್ತಿಯನ್ನು ಹೋಟೆಲು, ಬಿ ಎಂ ಎಸ್ ನ ಸಂಸ್ಥಾಪಕ ಕೆ ಜಯವರ್ಮರಾಜ್ ಬಲ್ಲಾಳರಿಗೆ ನೀಡಿ ಮಾತನಾಡಿದರು. ಕಲ್ಪವೃಕ್ಷ ಸಹಕಾರ ಪ್ರಶಸ್ತಿ ಯುಕ್ತ, ಯೋಗ್ಯ, ಸ್ವಾಭಿಮಾನಿ, ಶಿಸ್ತಿನ ಆದರ್ಶ ವ್ಯಕ್ತಿಗೆ ಲಭಿಸಿದೆ. ನನ್ನ ಚುನಾವಣಾ ಸಂದರ್ಭದಲ್ಲಿ ಕೂಡ ಸಾಕಷ್ಟು ಬೆಂಬಲ ನೀಡಿದ್ದರು ಎಂದು ನೆನಪಿಸಿಕೊಂಡರು. ಸಮಾಜದ ಅಭಿವೃದ್ಧಿ ಸಹಕಾರಿ ಗ್ರಾಮೀಣ ಸಂಸ್ಥೆಗಳಿಂದ ಮಾತ್ರ ಸಾಧ್ಯ ಎಂದರು.

ದ ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ವಿವಿಧ ಫಲಾನುಭವಿಗಳಿಗೆ ಪತ್ರಗಳನ್ನು ವಿತರಿಸಿ ಯಶಸ್ವಿ ಉದ್ಯಮಿ ಜಯವರ್ಮರಾಜ್ ರಿಗೆ 13ನೇ ಕಲ್ಪವೃಕ್ಷ ಪ್ರಶಸ್ತಿ ಲಭಿಸಿದೆ ಎಂಸಿಎಸ್ ಸೊಸೈಟಿ ಜನರ ಸಂಸ್ಥೆಯಾಗಿ ಮೂಡಿಬರಲು ಮುಖ್ಯ ಕಾರಣ ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಶ್ರಮವನ್ನು ಕೊಂಡಾಡಿದರು. ಈ ಸೊಸೈಟಿಗೆ ರಾಜ್ಯದ ಮೊದಲ ಸಹಕಾರ ಮಾಣಿಕ್ಯ ಪ್ರಶಸ್ತಿ ಲಭಿಸಿದೆ ಎಂದು ನೆನಪಿಸಿಕೊಂಡರು.

ಕೃಷಿ ಉತ್ಪನ್ನ ಮಾರುಕಟ್ಟೆ ಸೊಸೈಟಿಯ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗಡೆ ಅಭಿನಂದನಾ ಭಾಷಣದಲ್ಲಿ ಜಯವರ್ಮರಾಜ್ ರ ಬದುಕಿನ ಘಟ್ಟಗಳನ್ನು ವಿವರಿಸಿದರು. ಸರಳ ಸ್ವಭಾವದ, ಕೊಡುಗೈ ದಾನಿಯ ವಿಶಿಷ್ಟ ವ್ಯಕ್ತಿತ್ವವನ್ನು ಸಾದರಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಪರಸ್ಪರ ವಿಶ್ವಾಸ, ಸಹಕಾರದಿಂದ ಸೊಸೈಟಿ ಬೆಳೆಯಲು ಸಾಧ್ಯ ಎಂದರು. ವೇದಿಕೆಯಲ್ಲಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಉಪಾಧ್ಯಕ್ಷ ಗಣೇಶ್ ನಾಯಕ್ ಹಾಜರಿದ್ದರು.

ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕ ಮಾತಿನಲ್ಲಿ ಸೊಸೈಟಿಯ ವಿವಿಧ ಯೋಜನೆಗಳನ್ನು ತಿಳಿಸಿದರು. ಚೇತನ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಭಟ್ ವಂದಿಸಿದರು. ಸಭಾ ಕಾರ್ಯಕ್ರಮದ ತರುವಾಯ ವಿದ್ಯೆ ವಿಪರ್ಯಾಸ ಯಕ್ಷಗಾನ ನಡೆಯಿತು.