ಮೂಡುಬಿದಿರೆ ರೋಟರಿ ವಿದ್ಯಾ ಸಂಸ್ಥೆಗಳಲ್ಲಿ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭ

0
8

ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಲಯನ್ ರೊನಾಲ್ಡ್ ಸಿಲ್ವನ್ ಡಿಸೋಜಾ ಸಂಸ್ಥೆಗಳ ಕ್ರೀಡಾಳುಗಳಿಂದ ಮತ್ತು ಸಂಸ್ಥೆಯ ಬ್ಯಾಂಡ್ ಸೆಟ್ ತಂಡದಿಂದ ಗೌರವ ವಂದನೆ ಸ್ವೀಕರಿಸಿದರು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿಯಾದ ಶಿರ್ತಾಡಿಯ ಇನ್ನೋವಿಷನ್ ನೆಟ್‌ವರ್ಕ್‌ನ ಮಾಲೀಕ , ಶಿರ್ತಾಡಿ ಪ್ಯಾಕ್ಸ್ ಬ್ಯಾಂಕ್‌ನ ಉಪಾಧ್ಯಕ್ಷ ಚಿಂತನ್ ಲೋಬೊ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರೊ ನಾರಾಯಣ ಪಿ ಎಂ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕ್ರೀಡೆಗಳಲ್ಲಿ ನಿಮ್ಮ ಭಾಗವಹಿಸುವಿಕೆಯೇ ಮೊದಲ ಗೆಲುವು. ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ನಾರಾಯಣ್ ಪಿ. ಎಂ ಅವರು ಶಾಲಾ ಧ್ವಜಾರೋಹಣ ಮಾಡಿ ಕ್ರೀಡೆಗಳು ಜೀವನದಲ್ಲಿ ಶಿಸ್ತು ಕಲಿಸಿ, ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಲಕ್ಷ್ಮಿ ಮರಾಠೆ ಸ್ವಾಗತಿಸಿ, ಪ್ರೀತಿ ಮತ್ತು ಅನ್ಸಿಲ್ ಪ್ರಿನ್ಸಿಸ್ಟನ್ ಸೆರಾವೋ ಕಾರ್ಯಕ್ರಮ ನಿರೂಪಿಸಿ ವೈಶಾಲಿ ವಂದಿಸಿದರು.