ಕೆ.ಎಫ್.ಸಿ. ಇಂಡಿಯಾದಿಂದ ಹೊಸ ‘ಡಂಕ್ಡ್ ರೇಂಜ್’ ಬಿಡುಗಡೆ : ₹89ರಿಂದಲೇ ಸಿಗಲಿದೆ ಸಾಸ್‌ನಲ್ಲಿ ಮುಳುಗಿದ ಚಿಕನ್ ರುಚಿ!

0
4

ಎರಡು ವಿಭಿನ್ನ ಸಾಸ್‌ಗಳ ಆಯ್ಕೆ: ಟೆಕ್ಸಾಸ್ ಬಿಬಿಕ್ಯೂ ಮತ್ತು ಕೊರಿಯನ್ ಖಾರದ ರುಚಿಗೆ ಸಜ್ಜಾದ ಕೆ.ಎಫ್.ಸಿ. ಪ್ರಿಯರು

ಭಾರತ, ನವೆಂಬರ್ 10, 2026: ಆಹಾರ ಪ್ರಿಯರಿಗೆ ಹೊಸ ರುಚಿಯ ಅನುಭವ ನೀಡುವ ಉದ್ದೇಶದಿಂದ ಕೆ.ಎಫ್.ಸಿ. ಇಂಡಿಯಾ ತನ್ನ ಹೊಸ ‘ಡಂಕ್ಡ್ ರೇಂಜ್’ ಅನ್ನು ಬಿಡುಗಡೆ ಮಾಡಿದೆ. ಕೆ.ಎಫ್.ಸಿ.ಯ ಜನಪ್ರಿಯ ಗರಿಗರಿಯಾದ ಚಿಕನ್ ತಿನಿಸುಗಳನ್ನು ಎರಡು ವಿಭಿನ್ನ ಹಾಗೂ ರುಚಿಕರವಾದ ಸಾಸ್‌ಗಳಲ್ಲಿ ಮುಳುಗಿಸಿ ಸವಿಯುವ ಅವಕಾಶವನ್ನು ಈ ಹೊಸ ರೇಂಜ್ ಒದಗಿಸಲಿದೆ.

ಈ ಹೊಸ ರೇಂಜ್‌ನಲ್ಲಿ ಎರಡು ವಿಶೇಷ ಸಾಸ್‌ಗಳ ಆಯ್ಕೆ ಇದೆ. ಹೊಗೆಯಾಡುವ ವಿಶಿಷ್ಟ ರುಚಿ ಹಾಗೂ ಖಾರದ ಅನುಭವ ನೀಡುವ ಟೆಕ್ಸಾಸ್ ಬಿಬಿಕ್ಯೂ ಸಾಸ್ ಮತ್ತು ಕೊರಿಯನ್ ಶೈಲಿಯ ಗೋಚುಜಾಂಗ್, ಹುರಿದ ಎಳ್ಳು ಹಾಗೂ ಉಮಾಮಿ ರುಚಿಯ ಸಮ್ಮಿಶ್ರಣ ಹೊಂದಿರುವ ಖಾರದ ಕೊರಿಯನ್ ಸಾಸ್ ಗ್ರಾಹಕರಿಗೆ ವಿಭಿನ್ನ ರುಚಿ ನೀಡಲಿವೆ.

ನೆಚ್ಚಿನ ಚಿಕನ್ ಐಟಂಗಳಿಗೂ ಡಂಕ್ಡ್ ಟಚ್!

ಕೆ.ಎಫ್.ಸಿ.ಯ ಜನಪ್ರಿಯ ಜಿಂಗರ್ ಬರ್ಗರ್, ಬೋನ್‌ಲೆಸ್ ಚಿಕನ್ ಸ್ಟ್ರಿಪ್ಸ್, ಚಿಕನ್ ವಿಂಗ್ಸ್ ಹಾಗೂ ಚಿಕನ್ ಲೆಗ್ ಪೀಸ್‌ಗಳು ಇದೀಗ ಡಂಕ್ಡ್ ಶೈಲಿಯಲ್ಲಿ ಲಭ್ಯವಾಗಲಿವೆ. ಪ್ರತಿಯೊಂದು ಗರಿಗರಿಯಾದ ಚಿಕನ್ ತುಂಡಿಗೂ ಸಮೃದ್ಧ ಸಾಸ್‌ನ ಲೇಪನ ನೀಡುವ ಮೂಲಕ ಹೊಸ ರುಚಿಯ ಅನುಭವವನ್ನು ಪರಿಚಯಿಸಲಾಗಿದೆ.

ಕೇವಲ ₹89ರಿಂದ ಹೊಸ ರುಚಿಯ ಅನುಭವ

ಈ ಡಂಕ್ಡ್ ರೇಂಜ್‌ನ ಬೆಲೆ ಕೇವಲ ₹89ರಿಂದ ಆರಂಭವಾಗಲಿದೆ. ಶೀಘ್ರದಲ್ಲೇ ಕರ್ನಾಟಕದಾದ್ಯಂತ ಲಭ್ಯವಾಗಲಿದೆ. ಪ್ರಸ್ತುತ ಕೊರಿಯನ್ ಸಾಸ್ ಆಯ್ಕೆ ಲಭ್ಯವಿದ್ದು, ಟೆಕ್ಸಾಸ್ ಬಿಬಿಕ್ಯೂ ಸಾಸ್ ಶೀಘ್ರದಲ್ಲೇ ಪರಿಚಯವಾಗಲಿದೆ.

ಗ್ರಾಹಕರು ಕೆ.ಎಫ್.ಸಿ. ಮಳಿಗೆಗಳಲ್ಲಿ ಡೈನ್‌-ಇನ್, ಟೇಕ್‌ಅವೇ ಮೂಲಕ ಅಥವಾ ಕೆ.ಎಫ್.ಸಿ. ಆ್ಯಪ್, ವೆಬ್‌ಸೈಟ್ ಹಾಗೂ ಪ್ರಮುಖ ಆಹಾರ ವಿತರಣಾ ಆ್ಯಪ್‌ಗಳ ಮೂಲಕ ಈ ಹೊಸ ತಿನಿಸುಗಳನ್ನು ಆರ್ಡರ್ ಮಾಡಬಹುದು.

ಎರಡು ವಿಭಿನ್ನ ಸಾಸ್‌ಗಳು, ನೆಚ್ಚಿನ ಚಿಕನ್ ತಿನಿಸುಗಳು ಮತ್ತು ಹೊಸ ರುಚಿಯ ಸಂಯೋಜನೆಯೊಂದಿಗೆ ಆಹಾರ ಪ್ರಿಯರಿಗೆ ವಿಶೇಷ ಅನುಭವ ನೀಡಲು ಕೆ.ಎಫ್.ಸಿ. ಇಂಡಿಯಾ ಸಜ್ಜಾಗಿದೆ.