ಡಿ.20ರಂದು ವಿಶ್ವ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶ: ಬೈಂದೂರಿನಲ್ಲಿ ಪೂರ್ವಭಾವಿ ಸಭೆ ಯಶಸ್ವಿ

0
7

ಬೈಂದೂರು : ಮುಂಬರುವ ಡಿಸೆಂಬರ್ 20, 2026ರಂದು ನಡೆಯಲಿರುವ ವಿಶ್ವ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶದ ಪೂರ್ವಸಿದ್ಧತೆಯ ಅಂಗವಾಗಿ ಬೈಂದೂರಿನಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.

ಸಮಾವೇಶವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ಸಿದ್ಧತೆ, ಸಂಘಟನೆ ಹಾಗೂ ವಿವಿಧ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು. ಸಮಾಜದ ಹಿರಿಯರು ಹಾಗೂ ವಿವಿಧ ಕ್ಷೇತ್ರಗಳ ವೃತ್ತಿಪರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಹಕರಿಸಿದ ವಿಶ್ವ ರಾಮಕ್ಷತ್ರಿಯ ಸಂಘ ಹಾಗೂ ಬೈಂದೂರು ರಾಮಕ್ಷತ್ರಿಯ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತು.

ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್.ಆರ್. ಶಶಿಧರ್ ನಾಯ್ಕ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.