ಪ್ರೇರಣಾ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬದ ಆಚರಣೆ

0
13

ಮೂಡುಬಿದಿರೆ : ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು . ವೇದಿಕೆಯಲ್ಲಿ ದೇವರ ಫೋಟೋ ಎದುರಿನಲ್ಲಿ ಆಕರ್ಷಕ ರೀತಿಯಲ್ಲಿ ಹೂಗಳಿಂದಲೇ ರಂಗವಲ್ಲಿ ಬಿಡಿಸಿ ಶಾಲೆಯ ಎಲ್ಲಾ 325 ವಿದ್ಯಾರ್ಥಿಗಳೂ ಪ್ರತ್ಯೇಕ ಪ್ರತ್ಯೇಕವಾಗಿ ಹಣತೆಯನ್ನು ಹಚ್ಚಿ ರಂಗವಲ್ಲಿಯ ಸುತ್ತಲೂ ಇಟ್ಟು ದೇವರಿಗೆ ನಮಿಸಿದಾಗ ಇಡೀ ಸಭಾಭವನದಲ್ಲಿ ಹಬ್ಬದ ವಾತಾವರಣ ಮೂಡಿತು .

ವಿದ್ಯಾರ್ಥಿಗಳು ಉತ್ಸಾಹದಿಂದ ದೇವರ ಭಜನೆ ಹಾಡುತ್ತಾ ಸಂಭ್ರಮಿಸಿದರು . ಮೂಡುಬಿದಿರೆ ಎ.ಜಿ.ಸೋನ್ಸ್ ಐಟಿಐ ಕಾಲೇಜಿನ ನಿವೃತ್ತ ಉದ್ಯೋಗಿ ಶ್ರೀನಿವಾಸ ಕಿಣಿಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸುತ್ತಾ , ಪ್ರೇರಣಾ ಶಾಲೆಯಲ್ಲಿ ವಿವಿಧ ಹಬ್ಬಗಳ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸುವುದರ ಮೂಲಕ ಗಮನ ಸೆಳೆಯುತ್ತಿದೆ . , ಶಾಲಾ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು , ಪ್ರೇರಣಾ ಶಾಲೆಯ ಟ್ರಸ್ಟಿ ಡಾ. ಆನಂದ ಕಾರ್ಲರು ಉಪಸ್ಥಿತರಿದ್ದರು .

ಪ್ರೇರಣಾ ಶಾಲೆಯ ಮುಖ್ಯೋಪಧ್ಯಾಯಿನಿ ವತ್ಸಲಾ ರಾಜೇಶ್ ರವರು ನಿರೂಪಣೆ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು . ಶಾಲೆಯ ವಿದ್ಯಾರ್ಥಿಗಳೇ ಸ್ವತಃ ರಚಿಸಿದ ಸುಂದರವಾದ ನೂರಾರು ಗೂಡುದೀಪಗಳು ಗಮನ ಸೆಳೆಯಿತು . ಶಾಲೆಯ ಎಲ್ಲಾ ಶಿಕ್ಷಕ , ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಹೂಗಳಿಂದ ವೇದಿಕೆಯನ್ನು ಅಲಂಕರಿಸಿ ಸಹಕರಿಸಿದರು .

ವರದಿ ರಾಯಿ ರಾಜ ಕುಮಾರ್

.