ಶ್ರೀ ಶಂಕರ ವಿಜಯೋತ್ಸವದ ಅಂಗವಾಗಿ ಹೆಬ್ರಿ ತಾಲೂಕು ಮಟ್ಟದ ಸ್ಪರ್ಧೆಯು ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದೊಂದಿಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಮೃತ ಭಾರತಿ ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ ಉದ್ಘಾಟಿಸಿ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯ ರಕ್ಷಣೆಯಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. ಆದ್ದರಿಂದ ಆಚಾರ್ಯರ ತತ್ತ್ವ ಚಿಂತನೆ ನಡೆಯಬೇಕು ಎಂದರು.

ಅತಿಥಿಗಳಾಗಿ ಶ್ರೀಧರ ಹೆಬ್ಬಾರ್ ಮಾತನಾಡಿ ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ ಶಂಕರರ ಅದ್ವೈತ ಸಿದ್ಧಾಂತದಿಂದ ಲೌಕಿಕ – ಅಲೌಕಿಕ ಸುಖಿ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸೀತಾರಾಮ ಹೆಬ್ಬಾರ್, ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಉಪಸ್ಥಿತರಿದ್ದರು. ಸ್ಪರ್ಧಾ ಸಂಚಾಲಕಿ ಸುನೀತಾ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿಯಾದ ಸೌಪರ್ಣಿಕಾ ಜೋಶಿ, ಐಶ್ವರ್ಯಲಕ್ಷ್ಮಿ ಸಹಕರಿಸಿದರು. ಹೆಬ್ರಿ ತಾಲೂಕಿನ ವಿವಿಧ ಸಂಸ್ಥೆಯ ವಿದ್ಯಾರ್ಥಿಗಳು ಭಾಷಣ, ಸ್ತೋತ್ರ ಗಾಯನ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

