ಇಂಡಿಯನ್ ಟ್ಯಾಲೆಂಟ್ ಒಲಂಪಿಯಾಡ್ ಸಂಸ್ಥೆಯವರು ನಡೆಸುವ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ 2026 ಕ್ಕೆ ವಿನ್ಸೆಂಟ್ ಡಿ ಕೋಸ್ತಾ ಭಾಜನರಾಗಿರುತ್ತಾರೆ. ಬೆಂಗಳೂರಿನ ಯಲಹಂಕದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿನ್ಸೆಂಟ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಿನ್ನಿಗೋಳಿ, ಮೂಡುಬಿದಿರೆ, ಸಾಣೂರು ಇತ್ಯಾದಿ ಪ್ರದೇಶಗಳಲ್ಲಿ ಉತ್ತಮ ಪ್ರಾಂಶುಪಾಲರಾಗಿ ಹೆಸರನ್ನು ಗಳಿಸಿದ ಇವರು ಪ್ರಸ್ತುತ ಉಡುಪಿ ಕುಂಜಿಬೆಟ್ಟಿನಲ್ಲಿರುವ ಮಣಿಪಾಲ ಡಾ ಟಿ ಎಂ ಎ ಪೈ ಫೌಂಡೇಶನ್ ಅವರ ಶಾರದಾ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ವರದಿ ರಾಯಿ ರಾಜ ಕುಮಾರ್

