ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಮಂಜೂರು – ಫಲಾನುಭವಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಸ್ತಾಂತರ

0
5

ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಮಂಜೂರಾಗಿದ್ದು ಇಂದು ದಿನಾಂಕ 26-11-2026 ರಂದು ಕಾಪು ತಾಲೂಕು ಪಂಚಾಯತ್ ಕಟ್ಟಡದ ಬಳಿ ಫಲಾನುಭವಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು.

ಸ್ವಾವಲಂಬಿ ಸಾರಥಿ ಯೋಜನೆಯಡಿ ಉಳಿಯಾರಗೋಳಿ ನಿವಾಸಿ ಸದಾನಂದ ಹಾಗೂ ಉದ್ಯಾವರ ನಿವಾಸಿ ಪ್ರಜ್ವಲ್ ಅವರಿಗೆ ಸೇರಿದಂತೆ ಒಟ್ಟು 2 ಫಲಾನುಭವಿಗಳಿಗೆ ವಾಹನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ಅಂನತ ಶಂಕರ್, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ್ ಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಶಂಕರ್, ಕಾಪು ತಾಲೂಕು ಪಂಚಾಯತ್ ಆಡಳಿತಾಧಿಕಾರಿಗಳಾದ ಚಂದ್ರಶೇಖರ್ ನಾಯ್ಕ್, ಕಾರ್ಮಿಕರ ಇಲಾಖೆಯ ಸಂಜಯ್ ಉಪಸ್ಥಿತರಿದ್ದರು.