ಆಸಕ್ತರಿಗೆ ನೆರವು ಒಲವು ಕಾರ್ಯಕ್ರಮ

0
4

ಬಂಟ್ವಾಳ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಹಾಗೂ ಜಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲ (ರಿ)ಕಲ್ಲಡ್ಕ ,ಹಾಗೂ ಪ್ರಜ್ಯೋತಿ ಬಳಗ ಮಂಗಳೂರು ಇವರ ಸಂಯುಕ್ತ ಆಶ್ರಯ ದಲ್ಲಿ ಆಸಕ್ತರಿಗೆ ನೆರವು ಒಲವು ಕಾರ್ಯಕ್ರಮ

ಕಲ್ಲಡ್ಕ : ಬಂಟ್ವಾಳ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಹಾಗೂ ಜಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲ (ರಿ)ಕಲ್ಲಡ್ಕ ,ಹಾಗೂ ಪ್ರಜ್ಯೋತಿ ಬಳಗ ಮಂಗಳೂರು ಇವರ ಸಂಯುಕ್ತ ಆಶ್ರಯ ದಲ್ಲಿ ಆಸಕ್ತರಿಗೆ,ನೆರವು ಒಲವು ಕಾರ್ಯಕ್ರಮವು ಶ್ರೀಮತಿಮೀನಾಕ್ಷಿ ಆರ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ. 24/11/26 ಮಂಗಳವಾರ ಕಲ್ಲಡ್ಕ ನೇತಾಜಿ ಯುವಕ ಮಂಡಲದಲ್ಲಿ ಜರಾಗಿತು.

ಪ್ರಜ್ಯೋತಿ ಬಳಗದ ಸಂಸ್ಥಾಪಕರು ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಚಂಚಲ ತೇಜೋಮಯ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರೇ ಉಳಿತಾಯವನ್ನು ಮಾಡಿ ಪ್ರಜ್ಯೋತಿ ಬಳಗವನ್ನು ಕಟ್ಟಿ ಅಶಕ್ತರಿಗೆ ನೆರವು ನೀಡುವ ಮೂರನೇ ಕಾರ್ಯಕ್ರಮವು ಇದಾಗಿದೆ .ಇದು ಬೆಳೆದು ಬಂದ ರೀತಿ ಹಾಗೂ ಇದರ ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು
ಪ್ರಜ್ಯೋತಿ ಬಳಗದಿಂದ ಏಳು ಮಂದಿ ಆಸಕ್ತರಿಗೆ ಸಹಾಯಧನ ವಿತರಿಸಲಾಯಿತು. ಹತ್ತು ಮಂದಿ ಪೌರ ಕಾರ್ಮಿಕರಿಗೆ ಆಹಾರದ ಕಿಟ್ ನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ ಪದ್ಮನಾಭ ಕೊಟ್ಟಾರಿ ಅವರನ್ನು ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿಯವರು ಮಹಿಳೆಯರೇ ನಡೆಸುವ ಸಾಮಾಜಿಕ ಚಿಂತನೆಯುಳ್ಳ ಅರ್ಥಪೂರ್ಣವಾದ ಕಾರ್ಯಕ್ರಮವು ಇದಾಗಿದೆ .ಇದಕ್ಕೆ ಹೆಚ್ಚಿನ ಮಹಿಳೆಯರು ಸೇರಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸುನಿಲ್ ಕುಮಾರ್, ಡಾ. ಕಮಲಾ ಪ್ರಭಾಕರ್ ಭಟ್, ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷೆ ಉಷಾ ನಾಯಕ್ ,ತಾಲೂಕು ಮಹಿಳಾ ಮಂಡಲದ ಅಧ್ಯಕ್ಷರಾದ ಧರ್ಮಾವತಿ,ಪ್ರಜ್ಯೋತಿ ಬಳಗದ ಮುಖ್ಯಸ್ಥರಾದ ಮನೋರಮ ಉಮೇಶನ್ ಮತ್ತು ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ವಿದ್ಯಾಕೊಟ್ಟಾರಿ ತಾಲೂಕು ಒಕ್ಕೂಟದ ಗೌರವಾಧ್ಯಕ್ಷರಾದ ಹೇಮಲತಾ ಜೆ ಸಾಲ್ಯಾನ್ ಉಪಸ್ಥಿತರಿದ್ದರು.

ವಿಜಯ ಪ್ರಕಾಶ್ ಇವರು ಪ್ರಾರ್ಥಿಸಿ,,ಲಕಿತ ಆರ್ ಶೆಟ್ಟಿ ಸ್ವಾಗತಿಸಿ, ಹಿರಣ್ಮಯಿ ವಂದಿಸಿದರು.. ಪ್ರಜ್ಯೋತಿ ಬಳಗದ ಸದಸ್ಯರಾದ ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.