ವಾರ್ಷಿಕ ಕೋಲೋತ್ಸವದ ಅಂಗವಾಗಿ ಪಣೋಲಿಬೈಲು ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಿಕೆ

0
12

ಸಜೀಪ ಮೂಡ : ಶ್ರೀ ಪಣೋಲಿಬೈಲು ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಕೋಲೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ಶ್ರೀ ಕ್ಷೇತ್ರದಲ್ಲಿ ಪುಣ್ಯಾಹ, ಪಂಚಗವ್ಯ, ದ್ವಾದಶ ನಾಳಿಕೇರ ಗಣಯಾಗ, ನವಕ ಪ್ರಧಾನ ಕಲಶಾಭಿಷೇಕ, ಪರ್ವ ಸೇವೆ, ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿಗುತ್ತು ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ದಿವಾಕರ ಮುಗುಳ್ಯ, ಪಾಲೆ ಮಂಟಪ ಸಂಸಾರದ ಅಜಿತ್ ಜೈನ್, ದೇವಿಪ್ರಸಾದ್ ಪೂಂಜ, ಜಯರಾಮ ಶೆಟ್ಟಿ, ನಗ್ರಿಗುತ್ತು ಎಸ್. ಶ್ರೀಕಾಂತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮೋಹನದಾಸ ಹೆಗ್ಡೆ, ಒಂದನೇ ಮೂಲ್ಯ ವಾಸುದೇವ, ಎರಡನೇ ಮೂಲ್ಯ ನಾರಾಯಣ, ಮೂರನೇ ಮೂಲ್ಯ ಮೋನಪ್ಪ, ರಮೇಶ್ ಕುಲಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.