ತುಳು ಅಧಿಕೃತ ಭಾಷೆ ಆದೇಶ ಹೊರಡಿಸಿದ ಸರ್ಕಾರ : ತುಳು ಅಕಾಡೆಮಿಯಿಂದ ಅಭಿನಂದನೆ ಸಲ್ಲಿಕೆ

0
9

ಮಂಗಳೂರು: ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಭಾಷೆಯನ್ನು ಜಾರಿಗೊಳಿಸಿದ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಅಧಿಕೃತವಾಗಿ ಸರಕಾರಿ ಆದೇಶವಾಗಿ ಹೊರಡಿಸಿರುವುದನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ವಾಗತಿಸಿದೆ.

ಕಳೆದ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಘೋಷಿಸಿದ್ದರು.

ಸಂಪುಟ ಸಭೆಯ ನಿರ್ಣಯದ ಈ ಘೋಷಣೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸರ್ಕಾರಿ ಆದೇಶವನ್ನು ರಾಜ್ಯಪಾಲರ ಪರವಾಗಿ ನ. 25 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರು ಪ್ರಕಟಿಸಿರುತ್ತಾರೆ.

ಜಿಲ್ಲಾಡಳಿತದಲ್ಲಿ ತುಳು ಭಾಷೆಯನ್ನು ಅನುಷ್ಠಾನಗೊಳಿಸುವ ವಿಧಿ ವಿಧಾನಗಳ ಬಗ್ಗೆ ಈ ಆದೇಶವು ನಿರ್ದೇಶನಗಳನ್ನು ನೀಡಿರುತ್ತದೆ.

ತುಳುವರ ಬಹುಕಾಲದ ಬೇಡಿಕೆಯನ್ನು ಅನುಷ್ಠಾನಕ್ಕೆ ತರಲು ಕಾರಣಕರ್ತರಾದ ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ, ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರನ್ನು, ಎಲ್ಲಾ ಶಾಸಕರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದಿಸಿದ್ದಾರೆ.