ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಅತ್ಯಾಧುನಿಕ ಎಸ್‌ಬಿಆರ್‌ಟಿ ಚಿಕಿತ್ಸೆ ಈಗ ಮಂಗಳೂರಿನಲ್ಲಿ ಲಭ್ಯ

0
277

ಮಂಗಳೂರು: ೬೧ ವರ್ಷ ವಯಸ್ಸಿನ ಮೂತ್ರ ಸಂಬಂ ಸಮಸ್ಯೆಗಳನ್ನು ಹೊಂದಿದ್ದ ರೋಗಿಯೊಬ್ಬರು ಪ್ರಾಸ್ಟೇಟ್ ಕ್ಯಾನ್ಸರ್‌ನ ಚಿಕಿತ್ಸೆಗಾಗಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯ ಆಂಕಾಲಜಿ ಸೆಂಟರ್ (ಕೆಎಂಸಿಎಚ್‌ಎಒಸಿ)ನಲ್ಲಿ ಸ್ಟೀರಿಯೋಟ್ಯಾಕ್ಟಿಕ್ ಬಾಡಿ ರೇಡಿಯೇಶನ್ ಥೆರಪಿ (ಎಸ್‌ಬಿಆರ್‌ಟಿ) ಗೆ ಯಶಸ್ವಿಯಾಗಿ ಒಳಪಟ್ಟಿದ್ದಾರೆ. ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಗೆ ಸಂಬAಧಪಟ್ಟAತೆ ಈ ಭಾಗದಲ್ಲಿ ಇದೊಂದು ಗಮನಾರ್ಹ ಮುನ್ನಡೆಯಾಗಿದೆ. ಏಕೆಂದರೆ ಅತ್ಯಾಧುನಿಕ ಕ್ಯಾನ್ಸರ್ ಆರೈಕೆ-ಚಿಕಿತ್ಸೆ ಅಗತ್ಯವಾಗಿರುವ ಸ್ಥಳೀಯ ರೋಗಿಗಳಿಗೆ ಒಂದು ಉತ್ತಮ ಆಯ್ಕೆಯಾಗಿ ಎಸ್‌ಬಿಆರ್‌ಟಿಯು ಈಗ ಕೆಎಂಸಿ ಅತ್ತಾವರದಲ್ಲಿ ಲಭ್ಯವಿದೆ.
ಈ ರೋಗಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಸಮಗ್ರ ಪರೀಕ್ಷೆಯ ವೇಳೆ ಪತ್ತೆಯಾಗಿತ್ತು. ಇದಕ್ಕಾಗಿ ಅವರಿಗೆ ಪಿಎಸ್‌ಎಂಎ ಸ್ಕಾö್ಯನ್ ಮತ್ತು ಪ್ರಾಸ್ಟೇಟ್ ಬಯಾಪ್ಸಿಗಳನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳ ವೇಳೆ ಪ್ರಾಸ್ಟೇಟ್ ಕ್ಯಾನ್ಸರ್ ಸ್ಥಳೀಯವಾಗಿ ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಹು ವಿಭಾಗೀಯ ಮೂತ್ರಾಂಗ – ಆಂಕಾಲಜಿ ಟ್ಯೂಮರ್ ಬೋರ್ಡ್ ಈ ರೋಗಿಗೆ ಅಗತ್ಯವಾದ ನಿರ್ದಿಷ್ಟ ಚಿಕಿತ್ಸಾ ಯೋಜನೆಯನ್ನು ವಿನ್ಯಾಸಗೊಳಿಸಿತು.
ಅದರಂತೆ, ಅತ್ಯಂತ ನಿಖರವಾದ ಮತ್ತು ಗಾಯವನ್ನು ಉಂಟು ಮಾಡದ ಚಿಕಿತ್ಸಾ ವಿಧಾನವಾಗಿರುವ ಅತ್ಯಾಧುನಿಕ ಎಸ್‌ಬಿಆರ್‌ಟಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ವಿಕಿರಣ ಚಿಕಿತ್ಸೆಯ ಈ ಅತ್ಯಾಧುನಿಕ ವಿಧಾನವು ಕ್ಯಾನ್ಸರ್ ಗಡ್ಡೆಯ ಸುತ್ತಲಿನ ಆರೋಗ್ಯವಂತ ಅಂಗಾAಶಗಳಿಗೆ ಹಾನಿ ಅತ್ಯಂತ ಕಡಿಮೆ ಇರುವಂತೆ ನಿಖರವಾದ ಗುರಿನಿರ್ದಿಷ್ಟ ವಿಕಿರಣ ಚಿಕಿತ್ಸೆಯನ್ನು ನೀಡುವುದನ್ನು ಸಾಧ್ಯವಾಗಿಸುತ್ತದೆ. ಇಡೀ ಚಿಕಿತ್ಸೆಯನ್ನು ಹೊರ ರೋಗಿ ವಿಭಾಗ ಆಧಾರಿತವಾಗಿಯೇ ಒದಗಿಸಲಾಗಿದ್ದು, ರೋಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯ ಬೀಳಲಿಲ್ಲ. ರೋಗಿಯು ಪ್ರತೀ ಸಲ ಕೇವಲ ಹತ್ತು ನಿಮಿಷಗಳ ಅವಧಿಯ ಐದು ಎಸ್‌ಬಿಆರ್‌ಟಿಗಳನ್ನು ಪಡೆದುಕೊಂಡಿದ್ದರು.
ರೇಡಿಯೇಶನ್ ಆಂಕಾಲಜಿ ವಿಭಾಗದ ಡಾ| ಪೌಲ್ ಸೈಮನ್, ಡಾ| ಅತಿಯಮಾನ್ ಎಂ. ಎಸ್, ಡಾ| ಸೌರ್ಜ್ಯ ಬ್ಯಾನರ್ಜಿ, ಡಾ| ಜೊಹಾನ್ ಸನ್ನಿ ಮತ್ತು ಡಾ| ಅಭಿಷೇಕ್ ಕೃಷ್ಣ ಹಾಗೂ ಮೆಡಿಕಲ್ ಫಿಸಿಕ್ಸ್ ತಂಡದ ಡಾ| ಡಿಲ್ಸನ್ ಲೋಬೊ ಮತ್ತು ಡಾ| ಚಲ್ಲಪಳ್ಳಿ ಶ್ರೀನಿವಾಸ್ ಅವರನ್ನು ಒಳಗೊಂಡ ಆಸ್ಪತ್ರೆಯ ಪರಿಣತ ವೈದ್ಯರು, ತಂತ್ರಜ್ಞರ ತಂಡದ ಸಂಯೋಜಿತ ಫಲವಾಗಿ ಈ ಯಶಸ್ಸನ್ನು ಸಾಧಿಸಲಾಗಿದೆ. ಮೂತ್ರಾಂಗ ತಜ್ಞ ವೈದ್ಯರಾದ ಡಾ| ಸನ್ಮಾನ್ ಕೆ.ಎನ್., ರೇಡಿಯಾಲಜಿಸ್ಟ್ಗಳಾಗಿರುವ ಡಾ| ಪರೀಕ್ಷಿತ್, ಶ್ರೀ ಅಭಿರಾಮ್ ಹಾಗೂ ತಂತ್ರಜ್ಞರು ಮತ್ತು ದಾದಿಯರ ಸಿಬ್ಬಂದಿಯನ್ನೂ ತಂಡವು ಒಳಗೊಂಡಿತ್ತು.
ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಸ್‌ಬಿಆರ್‌ಟಿಯನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಈಗಾಗಲೇ ಬಳಸಲಾಗುತ್ತಿದೆ. ಆದರೆ ಮಂಗಳೂರು ಮತ್ತು ಆಸುಪಾಸಿನಲ್ಲಿ ಕ್ಯಾನ್ಸರ್ ಆರೈಕೆ-ಚಿಕಿತ್ಸೆಯಲ್ಲಿ ಕೆಎಂಸಿ ಆಸ್ಪತ್ರೆ, ಅತ್ತಾವರದಲ್ಲಿ ಈ ಸೌಲಭ್ಯ ಇರುವುದು ಈ ಭಾಗದ ರೋಗಿಗಳಿಗೆ ಒಂದು ವರದಾನವೇ ಸರಿ. ಇದರಿಂದಾಗಿ ಇಂದಿನ ಅತ್ಯಂತ ನಿಖರ ಮತ್ತು ಗಾಯ ರಹಿತ ಕ್ಯಾನ್ಸರ್ ಚಿಕಿತ್ಸೆಯು ಈ ಭಾಗದ ರೋಗಿಗಳ ಕೈಗೆಟುಕಿಗೆ ಸಿಗುವಂತಾಗಿದೆ.
ಈ ಯಶಸ್ಸು ಅತ್ಯುಚ್ಚ ಗುಣಮಟ್ಟದ ಚಿಕಿತ್ಸೆಯ ಆಯ್ಕೆಗಳನ್ನು ರೋಗಿಗಳಿಗೆ ಒದಗಿಸುವ ಅತ್ತಾವರ ಕೆಎಂಸಿ ಆಸ್ಪತ್ರೆಯ ಬದ್ಧತೆಗೆ ಸಾಕ್ಷಿಯಾಗಿದೆ. ಅಲ್ಲದೆ ಮಂಗಳೂರಿನ ವೈದ್ಯ ಸಮುದಾಯದ ವಿಕಸಿಸುತ್ತಿರುವ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯೂ ಆಗಿದೆ. ಈ ಚಿಕಿತ್ಸಾ ಆಯ್ಕೆಯು ಚಿಕಿತ್ಸೆಯು ಗುಣಮಟ್ಟವನ್ನು ಮಾತ್ರ ಹೆಚ್ಚಿಸುವುದಲ್ಲ; ಇಂತಹ ಅತ್ಯಾಧುನಿಕ ಚಿಕಿತ್ಸೆಗಾಗಿ ದೊಡ್ಡ ನಗರಗಳತ್ತ ಪ್ರಯಾಣಿಸಬೇಕಾದ ಅನಿವಾರ್ಯ ಸ್ಥಿತಿಯನ್ನು ಕೂಡ ದೂರ ಮಾಡುತ್ತದೆ.
೧೯೯೨ರಲ್ಲಿ ಆರಂಭವಾದ ಅತ್ತಾವರ ಕೆಎಂಸಿಯ ಆಂಕಾಲಜಿ ಕೇಂದ್ರ (ಕೆಎಂಸಿಎಚ್‌ಎಒಸಿ)ವು ಮಂಗಳೂರಿನ ಮಟ್ಟಿಗೆ ಅತ್ಯಾಧುನಿಕವಾದ ಮತ್ತು ತಾಂತ್ರಿಕವಾಗಿ ಉತ್ಕೃಷ್ಟ ದರ್ಜೆಯದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅತ್ಯುಚ್ಚ ದರ್ಜೆ ಮತ್ತು ಗುಣಮಟ್ಟದ ಸೌಲಭ್ಯಗಳು ಮತ್ತು ಅತೀ ನಿಖರ ತಂತ್ರಜ್ಞಾನಗಳನ್ನು ಅಳವಡಸಿಕೊಳ್ಳುವ ಮೂಲಕ ಕೇಂದ್ರವು ಕ್ಯಾನ್ಸರ್ ರೋಗಿಗಳಿಗೆ ರೋಗಪತ್ತೆ ಮತ್ತು ಚಿಕಿತ್ಸೆಗಳಿಗೆ ಸಂಬAಧಿಸಿ ಸಮಗ್ರ ಸೇವೆಯನ್ನು ಒದಗಿಸಬಲ್ಲುದಾಗಿದೆ.
ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ಸ್ಥಳೀಯವಾಗಿಯೇ ಎಸ್‌ಬಿಆರ್‌ಟಿ ಚಿಕಿತ್ಸಾ ಸೇವೆಯು ಲಭ್ಯವಿರುವುದು ಒಂದು ವರದಾನವೇ ಆಗಿದೆ. ಯಾಕೆಂದರೆ ಈ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಮಾತ್ರವಲ್ಲದೆ ಇದರಿಂದ ದೈನಿಕ ಚಟುವಟಿಕೆಗಳಿಗೆ ತೊಂದರೆ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ

LEAVE A REPLY

Please enter your comment!
Please enter your name here