ಹಳೆಯಂಗಡಿ: ಯುವ ಜನಾಂಗ ಕೃಷಿ ಜೊತೆ ಸಂಸ್ಕಾರ ಹಾಗೂ ಸಂಸ್ಕೃತಿ ರೂಡಿಸಿಕೊಳ್ಳಬೇಕು : ಚಂದ್ರಶೇಖರ ನಾಣಿಲ್

0
152

ಹಳೆಯಂಗಡಿಯಲ್ಲಿ “ಕೃಷಿ ಬದ್ ಕ್ ಡ್ ಆಟಿ” ಕಾರ್ಯಕ್ರಮ

ಮುಲ್ಕಿ: ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಯುವವಾಹಿನಿ ಹಳೆಯಂಗಡಿ ಘಟಕ ಜಂಟಿಯಾಗಿ “ಕೃಷಿ ಬದ್ ಕ್ ಡ್ ಆಟಿ” ಕಾರ್ಯಕ್ರಮ ಹಳೆಯಂಗಡಿ ಬಿಲ್ಲವ ಭವನದಲ್ಲಿ ನಡೆಯಿತು
ಕಾರ್ಯಕ್ರಮವನ್ನು ವೇದಿಕೆಯಲ್ಲಿ ಅಲಂಕಾರ ಮಾಡಿದ ಹಿಂದಿನ ಕಾಲದ ಶೈಲಿಯಗದ್ದೆಯಲ್ಲಿ ನೇಜಿ ನೆಡುವ ಮೂಲಕ ಉದ್ಘಾಟಿಸಲಾಯಿತು.
ಸಾಹಿತಿ ವಿಜಯಲಕ್ಷ್ಮಿ ಕಟೀಲು ಹಿಂದಿನ ಆಷಾಡ ಮಾಸದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾಣಿಲ್ ವಹಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಕೃಷಿ ಮರೆಯಾಗುತ್ತಿದ್ದು ಕೃಷಿಯ ಜೊತೆ ಜೀವನದಲ್ಲಿಸಂಸ್ಕಾರ ಸಂಸ್ಕೃತಿ ರೂಡಿಸಿಕೊಳ್ಳಲು ಯುವ ಜನಾಂಗ ಶ್ರಮಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೃಷಿ ಕ್ಷೇತ್ರದ ಸಾಧಕ ಪದ್ಮನಾಭ ಕೋಟ್ಯಾನ್, ಹಳೆಯಂಗಡಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ ಬಂಗೇರ, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್ ಸುವರ್ಣ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ವಿದ್ಯಾ ರಾಕೇಶ್, ಯುವ ವಾಹಿನಿ ಘಟಕದ ಅಧ್ಯಕ್ಷ ರವಿ ಜಿ ಅಮೀನ್,, ಉದ್ಯಮಿಗಳಾದ ಜಗನ್ನಾಥ ಸನಿಲ್, ಗೋಪಾಲ ಕೃಷ್ಣ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ವಾಗಿ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಪ್ರಶಸ್ತಿ ಗಳಿಸಿದ ಸುಷ್ಮಾ ತಾರಾನಾಥ್ ರವರನ್ನು ಸನ್ಮಾನಿಸಲಾಯಿತು ಹಾಗೂ ಹಿರಿಯ ಕೃಷಿಕರಾದ ಪ್ರಮೀಳಾ ಮತ್ತು ಹೇಮಾವತಿ ರವರನ್ನು ಗೌರವಿಸಲಾಯಿತು ಹಾಗೂ ಸುಮಾರು 35 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಸ್ತ ನೀಡಲಾಯಿತು. ಯುವವಾಹಿನಿ ಮಾಜಿ ಅಧ್ಯಕ್ಷ ಶರತ್ ಸಾಲ್ಯಾನ್ ಸ್ವಾಗತಿಸಿದರು,
ಕಟ್ಟೋಣ ಸಮಿತಿಯ ಭಾಸ್ಕರ್ ಸಾಲ್ಯಾನ್ ಪ್ರಸ್ತಾಪಿಸಿದರು, ದೀಪಕ್ ಧನ್ಯವಾದ ಅರ್ಪಿಸಿದರು. ಬಿಲ್ಲವ ಸಂಘದ ಕಾರ್ಯದರ್ಶಿ ಕಲ್ಲಾಡಿ ಹಿಮಕರ ಸುವರ್ಣ ಹಾಗೂ ಪ್ರಣವಿ ನಿರೂಪಿಸಿದರು.
ಬಳಿಕ ಆಟಿ ತಿಂಗಳ ವಿಶೇಷ ತಿನಿಸುಗಳ ಊಟ ನಡೆಯಿತು.

LEAVE A REPLY

Please enter your comment!
Please enter your name here