ಉಡುಪಿ: ಚಿತ್ರಕಲಾ ಮಂದಿರ ಕಲಾಶಾಲೆಯ 2002-07ನೇ ಸಾಲಿನ ವಿದ್ಯಾರ್ಥಿಗಳ ಸಮೂಹ ಕಲಾ ಪ್ರದರ್ಶನ ಸಂಗಮ ಉದ್ಘಾಟನಾ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮವು ಆ. 23ರಂದು ಬೆಳಿಗ್ಗೆ 10-330 ರಿಂದ ಉಡುಪಿ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾ ಮಂದಿರದಲ್ಲಿ ನಡೆಯಲಿದೆ.
ಮಧುರಂ ವೈಟ್ ಲೋಟಸ್ ನ ಹೊಟೇಲ್ ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಮರಣಿಕಾ ಸಂಸ್ಥಾಪಕ ದಿವಾಕರ ಸನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿತ್ರಕಲಾ ಮಂದಿರದ ಕಲಾಶಾಲೆಯ ಡಾ. ನಿರಂಜನ್ ಯು.ಸಿ. ಅವರು ಉಪಸ್ಥಿತಿ ಇರಲಿದ್ದಾರೆ. ದಿ. ಕೆ.ಎಲ್. ಭಟ್ ಅವರಿಗೆ ಗುರುವಂದನೆ ನಡೆಯಲಿದೆ.

