ಸೆ. 11ರಂದು ಆಂಧ್ರ ಉಪಮುಖ್ಯಮಂತ್ರಿ, ಸ್ಟಾರ್ ನಟ ಪವನ್ ಕಲ್ಯಾಣ್ ಧರ್ಮಸ್ಥಳಕ್ಕೆ

0
187

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಸ್ಟಾರ್ ನಟರಾಗಿರುವ ಪವನ್ ಕಲ್ಯಾಣ್ ಅವರು ಸೆಪ್ಟೆಂಬರ್ 11 ರಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಧರ್ಮಸ್ಥಳದ ಪರವಾಗಿ ನಿಲುವು ಪ್ರಕಟಿಸಲೆಂದೇ ಪವನ್ ಕಲ್ಯಾಣ್ ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಸೆಪ್ಟೆಂಬರ್ 11 ರಂದು ಸಂಜೆ ಐದು ಗಂಟೆ ವೇಳೆಗೆ ಪವನ್ ಕಲ್ಯಾಣ್ ಅವರು ಧರ್ಮಸ್ಥಳಕ್ಕೆ ಆಗಮಿಸಲಿದ್ದು, ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಪವನ್ ಕಲ್ಯಾಣ್ ಮಾಡಿಸಲಿದ್ದಾರೆ. ಅದೇ ದಿನ ದೇವಾಲಯದ ಮುಂಭಾಗ ಆರತಿ ಸೇವೆಯನ್ನು ಸಹ ಪವನ್ ಕಲ್ಯಾಣ್ ಮಾಡಲಿದ್ದಾರೆ. ಧರ್ಮಾಧಿಕಾರಿಯವರನ್ನು ಸಹ ಪವನ್ ಅವರು ಭೇಟಿ ಆಗುವ ಸಾಧ್ಯತೆ ಇದೆ.

ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದ ಸಂಸ್ಥಾಪಕರಾಗಿದ್ದು , ಪ್ರಸ್ತುತ ಆಂಧ್ರದ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಸರ್ಕಾರದ ಭಾಗವಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಹಿಂದೂಪರ ನಿಲುವು ಪ್ರಕಟಿಸುತ್ತಾ ಬಂದಿರುವ ಪವನ್ ಕಲ್ಯಾಣ್, ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು ಪತ್ತೆ ಆದಾಗಲೂ ಸಹ ತಿರುಪತಿಗೆ ಭೇಟಿ ನೀಡಿ ಅಲ್ಲಿ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here