ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾಗಿ  ಸತೀಶ್ ಪೆಂಗಲ್‌  ಆಯ್ಕೆ

0
128

‌ ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶನ ಕಾರ್ಫೊರೇಟರ್‌ ರಾಗಿ ಹಾಗೂ ಅನೇಕ ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸತೀಶ್ ಪೆಂಗಲ್‌ ಇವರನ್ನು  ವಿಧಾನ ಪರಿಷತ್‌ ಶಾಸಕರಾದ  ಐವನ್‌ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಅಖಿಲ ಭಾರತ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಇಮ್ರಾನ್‌  ಪ್ರತಾಪ್‌ಗರ್ಹಿ, ಎಂ.ಪಿ. ಇವರ ನಿರ್ದೇಶನದಂತೆ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಜನಾಬ್‌ ಕೆ. ಅಬ್ದುಲ್‌ ಜಬ್ಬಾರ್‌ರವರು  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಯನ್ನಾಗಿ ನೇಮಕ ಮಾಡಿರುತ್ತಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯಾದರ್ಶಿಯಾಗಿ, ಮಂಗಳೂರು ಉತ್ತರ ವಲಯ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ, ಪ್ರೊಸ್ಟೆಸ್ಟೆಂಟ್‌  ಕ್ರಿಶ್ಚಿಯನ್‌ ವೇಲ್ಪೇರ್‌ ಅಸೋಸಿಯೇಷನ್‌ ಇದರ ಸ್ಥಾಪಕಾಧ್ಯಕ್ಷರಾಗಿ, ಪ್ರೆಂಡ್  ಇನ್‌ ನೀಡ್‌ ಸೊಸೈಟಿ ಬಲ್ಮಠ, ಮಂಗಳೂರು ಇದರ ನಿರ್ದೇಶಕರಾಗಿ, ಜೈಹಿಂದ್‌ ಯುವಕ ಮಂಡಲ ಬೊಕ್ಕಪಟ್ಣ ಮಂಗಳೂರು ಇದರ ಕಮಿಟಿ ಸದಸ್ಯರಾಗಿ ಬಿ.ಇ.ಯಂ. ವಿದ್ಯಾಸಂಸ್ಥೆ ಕಾರ್‌ ಸ್ಟ್ರೀಟ್‌  ಮಂಗಳೂರು ಇದರ ಅಡಳಿತ ಮಂಡಳಿಯ ಸದಸ್ಯರಾಗಿ, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್‌ ಅಭಿವೃದ್ದಿ ಸಮಿತಿಯ ಸದಸ್ಯರಾಗಿ ಸತೀಷ್ ಪೆಂಗಲ್‌ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here